ಸ್ಟೆಪ್ಲರ್ ಪಿನ್​ ಬಳಸಿ ಪುಟಾಣಿ ವಾಹನ ತಯಾರಿಸಿದ ಮಹಿಳೆ; ಉದ್ಯೋಗ ನೀಡಲು ಸಿದ್ಧ ಎಂದ ಆನಂದ್ ಮಹೀಂದ್ರಾ!

car
Published on

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಟ್ವೀಟ್​ ಮಾಡುತ್ತಾ, ಸ್ಫೂರ್ತಿದಾಯಕ ಹಾಗೂ ಆಕರ್ಷಕ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ನಿಯಮಿತವಾಗಿ ತಮ್ಮ ಸ್ವಂತ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಜನರು ತಮ್ಮ ಸ್ವಂತ ಪ್ರಗತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.

ಆನಂದ್​ ಮಹೀಂದ್ರಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ಗಳಲ್ಲಿ ಇದೂ ಒಂದಾಗಿದ್ದು ಅನೇಕರ ಗಮನ ಸೆಳೆದಿದೆ. ಅವರು ಹಂಚಿಕೊಂಡ ವಿಡಿಯೋ ಸ್ಟೆಪ್ಲರ್​ ಹೊರತುಪಡಿಸಿ ಏನನ್ನೂ ಬಳಸದೆ ಸಣ್ಣ ವಾಹನವನ್ನು ರಚಿಸುವಲ್ಲಿ ಯಶಸ್ವಿಯಾದ ಮಹಿಳೆಯ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಆ ಮಹಿಳೆ ಯಾವುದೇ ರೀತಿಯ ಅಂಟು ಪದಾರ್ಥ ಅಥವಾ ಹೆಚ್ಚುವರಿ ವಸ್ತುಗಳನ್ನು ಬಳಸದೆಯೇ ಪುಟಾಣಿ ವಾಹನ ತಯಾರಿಸುವಲ್ಲಿ ಯಶ್ವಿ ಆದದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.

ಆನಂದ್​ ಮಹೀಂದ್ರಾ, "ಕೇವಲ ಸರಳವಾದ ಸ್ಟೆಪ್ಲರ್​ ಬಳಸಿ ತಮ್ಮ ಕಲ್ಪನೆಯನ್ನು ನಿಜವಾಗಿಸಿದ್ದು ಹೇಗೆ? ಅದ್ಭುತ ಸೃಜನಶೀಲತೆ ಹೊಂದಿರುವ ಅವರು ಕಾರು ತಯಾರಿಕೆ ಮತ್ತು ವಿನ್ಯಾಸದಲ್ಲಿ ಕೆಲಸ ಮಾಡಬೇಕು. ನಾವು ಅವಳನ್ನು ನೇಮಿಸಿಕೊಳ್ಳಲು ಸಿದ್ಧರಿದ್ದೇವೆ!" ಎಂದು ಬರೆದಿದ್ದಾರೆ. ಪೋಸ್ಟ್ ತ್ವರಿತವಾಗಿ ಜನರ ಗಮನವನ್ನು ಸೆಳೆದಿದ್ದು 15 ಲಕ್ಷ ವೀಕ್ಷಣೆಗಳನ್ನು ಮತ್ತು ಅಸಂಖ್ಯಾತ ಪ್ರತಿಕ್ರಿಯೆಗಳನ್ನು ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net