

ಮಿಲಾನ್: ರಸ್ತೆ ಬದಿ ನಿಲ್ಲಿಸಿದ್ದ ವಾಹನವೊಂದು ಸ್ಪೋಟಗೊಂಡು, ಅನೇಕ ಕಾರುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಇಟಲಿಯ ಮಿಲಾನ್ನಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಕ್ಸಿಜನ್ ಕ್ಯಾನ್ಗಳನ್ನು ಹೊತ್ತೊಯುತ್ತಿದ್ದ ವಾಹನವನ್ನು ಮಿಲಾನ್ನ ಪೋರ್ಟಾ ರೊಮಾನಾ ಪ್ರದೇಶದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಕ್ಯಾನ್ಗಳನ್ನು ಹೊತ್ತೊಯುತ್ತಿದ್ದ ವಾಹನ ಸ್ಪೋಟಗೊಂಡ ಪರಿಣಾಮವಾಗಿ ಹಲವಾರು ಕಾರುಗಳಿಗೆ ಬೆಂಕಿ ಪಸರಿಸಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು ಹೊತ್ತಿ ಉರಿಯುತ್ತಿದ್ದ ಕಾರುಗಳನ್ನು ನಂದಿಸಿದ್ದು, ಪಕ್ಕದಲ್ಲಿನ ಬೃಹತ್ ಕಟ್ಟಡಗಳು ದಟ್ಟವಾದ ಕಪ್ಪು ಹೊಗೆಗಳಿಂದ ಆವೃತವಾಗಿವೆ. ಸ್ಪೋಟದ ಕುರಿತು ತನಿಖೆ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.(ಏಜೆನ್ಸೀಸ್)