More

    ತಿಥಿ ಕಾರ್ಯದ ಊಟ ಸೇವಿಸಿ 40 ಜನರು ಅಸ್ವಸ್ಥ!

    ಅಸ್ಸಾಂ: ತಿಥಿ ಕಾರ್ಯವೊಂದರ ಊಟ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 40 ಜನರು ಅಸ್ವಸ್ಥರಾಗಿದ್ದಾರೆ. ಈ ಘಟನೆ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಗೋಲ್ಪಾರಾ ಜಿಲ್ಲೆಯ ಮರಿಯಂಪುರ ಪ್ರದೇಶದಲ್ಲಿ ನಡೆದ ಮರಣಾನಂತರದ ಧಾರ್ಮಿಕ ( ತಿಥಿ ಕಾರ್ಯ) ಕಾರ್ಯಕ್ರಮವೊಂದರಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 40 ಜನರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ರಂಗಜುಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ತನ್ನ ದೇಹದ ಭಾಗವನ್ನೇ ಬೇಯಿಸಿ ಬಾಯ್​​ಫ್ರೆಂಡ್​ಗೆ ತಿನ್ನಿಸಿದ ಯುವತಿ!

    ವಿಷಪೂರಿತ ಆಹಾರ ಸೇವಿಸಿದ ನಂತರ ಹೀಗಾಗಿದೆ ಎಂದು ಶಂಕಿಸಲಾಗಿದೆ. ಆದರೆ ಜನರ ಅನಾರೋಗ್ಯಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

    ಇದನ್ನೂ ಓದಿ: ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ; 15 ನಿಮಿಷ ಕಾದಾಡಿ ಜೀವ ಉಳಿಸಿಕೊಂಡ!

    “ತಿಥಿ ಕಾರ್ಯಕ್ರಮಕ್ಕೆ ಬಂದಿದ್ದವರು ಇತರ ಆಹಾರದ ಜೊತೆಗೆ ಮೀನುಗಳನ್ನು ಸೇವಿಸಿದ್ದಾರೆ” ಎಂದು ಕುಟುಂಬ ಸದಸ್ಯರು ತಿಳಿಸಿದರು. ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ, ಆದಾಗ್ಯೂ, ಇದು ಆಹಾರ ವಿಷಕಾರಿ ಪ್ರಕರಣ ಎಂದು ತೋರುತ್ತದೆ. ಈವರೆಗೆ 20-25 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೂ ಹಲವು ಅಸ್ವಸ್ಥರು ಬರುತ್ತಿದ್ದಾರೆ. ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಂಗಜುಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.

    ಈ ರಸ ಕುಡಿದರೆ ಹೊಳೆಯುವ ಚರ್ಮ ಸಿಗುತ್ತದೆ! ಏನಿದು ABC ಜ್ಯೂಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts