ಮದ್ಯವ್ಯಸನಿ ಕುಟುಂಬಕ್ಕೆ ಕಂಟಕ

Gur_Udgatane
Published on

ಗುರುಪುರ: ಮದ್ಯವ್ಯಸನಿ ಎಂದಿಗೂ ಕುಟುಂಬ, ಸವಾಜ ಮತ್ತು ದೇಶಕ್ಕೆ ಕಂಟಕ. ಮದ್ಯಪಾನಿ ಕುಟುಂಬವೊಂದರಲ್ಲಿದ್ದರೆ, ಆ ಕುಟುಂಬಕ್ಕೆ ವಾಮಾಚಾರದ ಅಗತ್ಯವಿಲ್ಲ. ದೇಶದ ಪ್ರಗತಿಯಾಗಬೇಕಿದ್ದರೆ ಸವಾಜ ಮದ್ಯಪಾನ ಮುಕ್ತವಾಗಬೇಕು ಎನ್ನುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆಶಯ. ಆದರೆ ಗಾಂಧಿ ಜಯಂತಿಯನ್ನು ವಿಶಿಷ್ಟ ರೀತೀಯಲ್ಲಿ ಆಚರಿಸುವ ಸರ್ಕಾರಗಳು ಕಳೆದ 20 ವರ್ಷದೀಚೆಗೆ ಮದ್ಯ ವಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ನಿಜಕ್ಕೂ ದುರಂತ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಘಟಕದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಜ್ಪೆ ಮಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ಘಟಕದ ಜಂಟಿ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಸಹಯೋಗದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ.ಹೇವಾವತಿ ವಿ.ಹೆಗ್ಗಡೆ ವಾರ್ಗದರ್ಶನದಲ್ಲಿ ಬುಧವಾರ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಮುದಾಯ ಭವನದಲ್ಲಿ ನಡೆದ ‘ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸವಾಜ ನಿರ್ವಾಣಕ್ಕಾಗಿ ಗಾಂಧಿ ಸ್ಮತಿ ಹಾಗೂ ನವಜೀವನ ಸದಸ್ಯರ ಅಭಿನಂದನಾ ಕಾರ್ಯಕ್ರಮ’ ಉದ್ಘಾಟಿಸಿ ವಾತನಾಡಿದರು.

ಡ್ರಗ್ಸ್ ಮುಕ್ತ ಸವಾಜ ನಿರ್ವಾಣ: ದ.ಕ. ಜಿಲ್ಲಾ ಜನಜಾಗೃತಿ ಟ್ರಸ್ಟ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ವಾತನಾಡಿ, ಪ್ರಸಕ್ತ ಸವಾಜಕ್ಕೆ ಮದ್ಯಪಾನದಷ್ಟೇ ವಾದಕ ದ್ರವ್ಯದ ದುಷ್ಪರಿಣಾಮ ತಟ್ಟಿದೆ. ಯುವಜನರು ಡ್ರಗ್ಸ್ ಸೇವನೆಗೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಮುಕ್ತ ಸವಾಜ ನಿರ್ವಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಸವಾಜಮುಖಿ ಸಂಟನೆಗಳು ಒಗ್ಗೂಡಿ ಕೆಲಸ ವಾಡಬೇಕು ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು ದ.ಕ. 1 ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ವಾತನಾಡಿ, ಇದು ನವಜೀವನ ಸಂಸಾರಿಗಳ ಕಾರ್ಯಕ್ರಮ. ಇದು ನಮ್ಮ ಮನೆಯ ಕಾರ್ಯಕ್ರಮ. ನವಜೀವನ ನಡೆಸುತ್ತಿರುವ ಮಂದಿ ಮುಜುಗರ ಬಿಟ್ಟು, ಇನ್ನೊಬ್ಬರ ಏಳಿಗೆಗೆ ಒಗ್ಗೂಡಿ ಕೆಲಸ ವಾಡಬೇಕು. ನವಜೀವನ ನಡೆಸುತ್ತಿರುವ ಮಂದಿಯ ಮದ್ಯಪಾನದ ಕತೆ ಇನ್ನೊಬ್ಬರ ಮನಃಪರಿವರ್ತನೆಗೆ ಕಾರಣವಾಗಬೇಕು ಎಂದರು.

ಉದ್ಘಾಟನೆ ಬಳಿಕ ಅತಿಥಿಗಳು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಳೆದ ಕೆಲವು ವರ್ಷಗಳಿಂದ ಸಾರ್ಥಕ ನವಜೀವನ ನಡೆಸುತ್ತಿರುವ ಹೇಮಚಂದ್ರ ಶೆಟ್ಟಿಗಾರ ಮತ್ತು ಹರೀಶ್ ಜೀವನಾನುಭವ ಹಂಚಿಕೊಂಡರು. ಬಜ್ಪೆಯ ಪ್ರಗತಿಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್, ಶೌರ್ಯ ವಿಪತ್ತು ನಿರ್ವಹಣಾ ಟಕ ಮಂಗಳೂರು ವಿಭಾಗದ ವಾಸ್ಟರ್ ಸತೀಶ್ ದೀಪಂ ಕುಂಪಲ, ಪ್ರವೀಣ್ ಕುವಾರ್ ಆದ್ಯಪಾಡಿ, ಜನಜಾಗೃತಿ ವೇದಿಕೆ ಮಂಗಳೂರು ತಾಲೂಕು ಉಪಾಧ್ಯಕ್ಷ ವಿಜಯ್ ಕೋಟ್ಯಾನ್ ಪಡು, ಬಜ್ಪೆ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಪುಷ್ಪಾವತಿ, ಉದಯ ಕುವಾರ್ ಆಳ್ವ, ಚಂದ್ರಶೇಖರ ಎಡಪದವು, ಸೋಹನ್ ಅತಿಕಾರಿ, ಮಹಾಬಲ ಚೌಟ ಮೊದಲಾದವರಿದ್ದರು.

ಮಂಗಳೂರು ಕಚೇರಿ ಯೋಜನಾಧಿಕಾರಿ ಮಮತಾ ಸ್ವಾಗತಿಸಿದರು. ಸಂಧ್ಯಾ ಭಂಡಾರಿ ನಿರೂಪಿಸಿದರು. ಪುರಂದರ ಪೂಜಾರಿ ವಂದಿಸಿದರು.

ಗಾಂಧೀಜಿಯವರು ಮತೀಯ ಶೋಷಣೆ ನಿಲ್ಲಬೇಕು, ಅಸ್ಪಶ್ಯತೆ ತೊಲಗಬೇಕು. ಮದ್ಯಪಾನ ಮುಕ್ತ ಸವಾಜ ನಿರ್ವಾಣವಾಗಬೇಕು ಎಂಬಿತ್ಯಾದಿ 18 ಸೂತ್ರದ ಮೂಲಕ ಈ ದೇಶದ ಅಭಿವೃದ್ಧಿ ಕನಸು ಕಂಡಿದ್ದರು. ಅವರ ಕನಸು ಇನ್ನೂ ನನಸಾಗಿಲ್ಲ. ಆದರೆ ಗಾಂಧೀಜಿ ಕನಸು ನನಸು ವಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಪ್ರಯತ್ನ ಮುಂದುವರಿಸಿದ್ದಾರೆ. ಮದ್ಯಮುಕ್ತ ಸವಾಜ, ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣ, ಪ್ರತಿಯೊಬ್ಬರಿಗೂ ಗೌರವಪೂರ್ಣ ಜೀವನ ನಡೆಸುವಂತಹ ವಾತಾವರಣ ಸೃಷ್ಟಿಸಿದ್ದಾರೆ. ವಿವೇಕ್ ವಿನ್ಸೆಂಟ್ ಪಾಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಘಟಕದ ಪ್ರಾದೇಶಿಕ ನಿರ್ದೇಶಕ.

ವಿವೇಕ್ ವಿನ್ಸೆಂಟ್ ಪಾಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಘಟಕದ ಪ್ರಾದೇಶಿಕ ನಿರ್ದೇಶಕ.

ದುಶ್ಚಟಮುಕ್ತಗೊಂಡ ವ್ಯಕ್ತಿಗೆ ಕುಟುಂಬ ಮತ್ತು ಸವಾಜದಲ್ಲಿ ಗೌರವ ಸಿಗುತ್ತದೆ. ಅವರು ಇತರರಿಗೆ ವಾದರಿ ವ್ಯಕ್ತಿಗಳಾಗಿರುವ ಉದಾಹರಣೆಗಳಿವೆ. ನವಜೀವನ ಕಾರ್ಯಕ್ರಮದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜನರ ಕಣ್ಣೀರೊರೆಸುವ ಕೆಲಸವಾಗುತ್ತಿದೆ. ಇಂತಹ ಕಾರ್ಯಕ್ರಮ ಸವಾಜದಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ. ಚಂದ್ರಶೇಖರ ಉಚ್ಚಿಲ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ಅಧ್ಯಕ್ಷ.

ಚಂದ್ರಶೇಖರ ಉಚ್ಚಿಲ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಗಳೂರು ಅಧ್ಯಕ್ಷ.

ಜನಜಾಗೃತಿ ಮೂಲಕ ಸವಾಜದಲ್ಲಿ ಪರಿವರ್ತನೆ ಕಾಣಬಹುದು ಎಂದು ನಂಬಿರುವ ಖಾವಂದರು, ಮದ್ಯಪಾನದಿಂದ ಮನೆ ಹಾಳು ಎಂದರಿತು ಮದ್ಯಮುಕ್ತ ಸವಾಜ ನಿರ್ವಾಣಕ್ಕೆ ಮುಂದಾಗಿದ್ದಾರೆ. ಮಹಾಬಲ ಕುಲಾಲ್, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು ದ.ಕ. ಜಿಲ್ಲಾ ನಿರ್ದೇಶಕ.

ಮಹಾಬಲ ಕುಲಾಲ್, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು ದ.ಕ. ಜಿಲ್ಲಾ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net