

ಮೂಲ್ಕಿ: ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಖೇನ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಾದಿಗ ದಂಡೋರ ವಾದಿಗ ಮೀಸಲಾತಿ ಹೋರಾಟ ಸಮಿತಿ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷ ಮಂಜುನಾಥ, ಬಿಜೆಪಿ ಮುಖಂಡ ವಿಟ್ಠಲ್ ಎನ್.ಎಂ., ಮೂಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಎಸ್‌ಸಿ, ಎಸ್‌ಟಿ ದೌರ್ಜನ್ಯ ಜಿಲ್ಲಾ ಸಮಿತಿ ಸದಸ್ಯ ರಮೇಶ್ ಹಂಗರಗಿ, ಆದಿಜಾಂಬವ ಯುವ ಬ್ರಿಗೇಡ್ ಅಧ್ಯಕ್ಷ ಶಿವಾನಂದ್, ಸಮುದಾಯದ ಮುಖಂಡರಾದ ಹುಲಿಗೇಶ್, ಶರಣು ಉಡುಪಿ, ಸದಾನಂದ ಸುಳ್ಯ, ಬಾಬು ಪುತ್ತೂರು, ನಗರ ಪಂಚಾಯಿತಿ ವಾಜಿ ಸದಸ್ಯ ವೀರಣ್ಣ ಅರಳಗುಂಡಗಿ, ಜಟ್ಟಿಂಗರಾಯ, ವಾದಿಗ ವಿದ್ಯಾರ್ಥಿ ಮುಖಂಡರಾದ ವಿಜಯ್, ಅಂಬರೀಶ್ ಮೊದಲಾದವರಿದ್ದರು.