ಕ್ರೀಡೆ

VIDEO | 19 ಕೋಟಿ ರೂ. ನೀಡಿ ಕೊಹ್ಲಿ ಖರೀದಿಸಿದ್ದ ಬಂಗಲೆ ಈಗ ರೆಸ್ಟೋರೆಂಟ್!

ನವದೆಹಲಿ: ಅತ್ಯಂತ ಶ್ರೀಮಂತ ಕ್ರೀಡಾ ತಾರೆಗಳಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕ್ರಿಕೆಟ್​ ಹೊರತಾಗಿ ಇತರೆ ವ್ಯವಹಾರ ಹೊಂದಿರುವ ಕೊಹ್ಲಿ, ಹಲವೆಡೆ ಹೂಡಿಕೆ ಮಾಡಿದ್ದಾರೆ. ಆಹಾರ ಉದ್ಯಮವನ್ನೂ ಹೊಂದಿರುವ ಕೊಹ್ಲಿ, ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ತಮ್ಮ ವ್ಯವಹಾರವನ್ನು ವಿಸ್ತರಿಸುವ ಉದ್ಧೇಶದಿಂದ ಕೊಹ್ಲಿ ಬಂಗಲೆಯೊಂದನ್ನು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದ್ದಾರೆ.

ಗಾಯಕ ಕಿಶೋರ್ ಕುಮಾರ್ ಅವರಿಗೆ ಸೇರಿದ್ದ ಅತ್ಯಂತ ಹಳೆಯದಾದ ಬಂಗಲೆಯನ್ನು ಕೊಹ್ಲಿ ಕಳೆದ ವರ್ಷ ಬರೋಬ್ಬರಿ 19 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಈಗಾಗಲೇ ದೆಹಲಿ ಮತ್ತು ಪುಣೆಯಲ್ಲಿ ರೆಸ್ಟೋರೆಂಟ್​ಗಳನ್ನು ಹೊಂದಿರುವ ಕೊಹ್ಲಿ ತಮ್ಮ ವ್ಯವಹಾರವನ್ನು ಮುಂಬೈಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಜುಹೂ ಎಂಬಲ್ಲಿ ಖರೀದಿಸಿರುವ ಐಷಾರಾಮಿ ಬಂಗಲೆಯನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ.

ಐಷಾರಾಮಿ ಬಂಗಲೆಗೆ ವಿಂಟೇಜ್ ಲುಕ್ ನೀಡಿದ್ದು, ಗ್ರಾಹಕರನ್ನು ಸೆಳೆಯುವಂತೆ ಮಾರ್ಪಾಡು ಮಾಡಿದ್ದಾರೆ. ಈ ರೆಸ್ಟೋರೆಂಟ್​ನಲ್ಲಿ ಉತ್ತರ ಭಾರತ ಮತ್ತು ಮೆಡಿಟರೇನಿಯನ್‌ನ ಆಹಾರಗಳು ಲಭ್ಯವಿದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಆಹಾರದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಕೊಹ್ಲಿ ದಂಪತಿ ತಮ್ಮ ರೆಸ್ಟೋರೆಂಟ್ ವ್ಯವಹಾರವನ್ನು ವಿಸ್ತರಿಸಿಕೊಂಡು ಬಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.