ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮಿಂಚಿನ ಬ್ಯಾಟಿಂಗ್ ಫಲವಾಗಿ ಭಾರತ ತಂಡವು ಶ್ರೀಲಂಕಾಗೆ 358 ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶುಭಮನ್ ಗಿಲ್ (92 ರನ್, 92 ಎಸೆತ, 11 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ (88 ರನ್, 94 ಎಸೆತ, 11 ಬೌಂಡರಿ), ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ಫಲವಾಗಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಪೇರಿಸಿತ್ತು.
ಶ್ರೀಲಂಕಾ ಪರ ದಿಲ್ಶಾನದದ ಮಧುಶಂಕ (10-0-80-5), ದುಶ್ಮಂತ ಚಮೀರಾ (10-2-71-1), ಮಹೀಶ್ ತೀಕ್ಷ್ಣ (10-0-67-0), ಕಸುನ್ ರಜಿತಾ (9-0-66-0), ದುಶನ್ ಹೇಮಂತ (8-0-52-0), ಏಂಜಲೋ ಮ್ಯಾಥ್ಯೂಸ್ (3-0-11-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ. 50 ಓವರ್ಗಳಲ್ಲಿ ಬೃಹತ್ ಗುರಿಯನ್ನು ಬೆನ್ನಟ್ಟಿ ಭಾರತದ ಅಜೇಯ ಓಟಕ್ಕೆ ಶ್ರೀಲಂಕಾ ಬ್ರೇಕ್ ಹಾಕಲಿದೆಯಾ ಎಂದು ಕಾದು ನೋಡಬೇಕಿದೆ.