ಮುಂಬೈ: ಭಾರತ ಕ್ರಿಕೆಟ್ ತಂಡದ ಏಳಿಗೆಯಲ್ಲಿ ತಮ್ಮದೇ ಆದ ಅಪಾರ ಕೊಡುಗೆಯನ್ನು ಕೊಟ್ಟಿರುವ ಕ್ರಿಕೆಟಿಗೆ ಎಂದರೆ ಮೊದಲಿಗೆ ಎಲ್ಲರ ಬಾಯಿಗೆ ಬರುವ ಹೆಸರೆಂದರೆ ಅದು ಸಚಿನ್ ತೆಂಡುಲ್ಕರ್. ಇದೀಗ ಅವರ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕ ಆನಡುವಿನ ಪಂದ್ಯದ ವೇಳೆ ಅನಾವರಣ ಮಾಡಲಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿನ ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮೆಲುಕು ಹಾಕಿರುವ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ಕೊನೆಯ ಪಂದ್ಯವನ್ನು ಇಲ್ಲೇ ಆಡಿದ್ದೇನೆ. ಇಲ್ಲಿನ ನನೆಪುಗಳನ್ನು ಮೆಲುಕು ಹಾಕಲು ಪದಗಳು ಸಾಲದು ಎಂದಿದ್ದಾರೆ.
ಈ ಪ್ರತಿಮೆ ನನಗೆ ಸೇರಿದ್ದಲ್ಲ. ನನ್ನ ಪರವಾಗಿ ನಿಂತ ಸಹ ಆಟಗಾರರು, ಕ್ರಿಕೆಟ್ ಹೀರೋಗಳು, ನಾನ್ ಸ್ಟ್ರೈಕರ್, ಸಹ ಆಟಗಾರರು ಹಾಗೂ ಸಹೋದ್ಯೋಗಿಗಳಿಗೆ ಇದನ್ನು ಅರ್ಪಿಸುತ್ತೇನೆ. ಏಕೆಂದರೆ ಅವರೆಲ್ಲ ಇಲ್ಲದೆ ಈ ಪಯಣ ಸಾಧ್ಯವಾಗುತ್ತಿಲಿಲ್ಲ. ಮೈದಾನದಲ್ಲಿ ಪ್ರತಿಮೆ ಅನಾವರಣ ಆಗುವದರೊಂದಿಗೆ ನನ್ನ ಜೀವನವೂ ಪರಿಪೂರ್ಣವಾದಮತೆ ಭಾಸವಾಗುತ್ತಿದೆ.
ಇದನ್ನೂ ಓದಿ: ದೂರು ದಾಖಲಿಸದೆ ಇರಲು ಲಂಚ ಪಡೆದ ಆರೋಪ; ಇಬ್ಬರು ED ಅಧಿಕಾರಿಗಳು ಅರೆಸ್ಟ್
1987ರ ವಿಶ್ವಕಪ್ ವೇಳೆ ಬಾಲ್ಬಾಯ್ ಆಗಿದ್ದನ್ನು ಮತ್ತು 2011ರಲ್ಲಿ ವಿಶ್ವಕಪ್ಅನ್ನು ಎತ್ತಿ ಹಿಡಿದಿದ್ದನ್ನು ಸಚಿನ್ ತೆಂಡೂಲ್ಕರ್ ಸ್ಮರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ಕೊನೆಯ ಪಂದ್ಯವನ್ನು ಇಲ್ಲೇ ಆಡಿದ್ದೇನೆ. ಇಲ್ಲಿನ ನನೆಪುಗಳನ್ನು ಮೆಲುಕು ಹಾಕಲು ಪದಗಳು ಸಾಲದು ಎಂದಿದ್ದಾರೆ.
ಮುಂಬೈ ಮೂಲದವರಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಾಂಖೆಡೆ ಕ್ರೀಡಾಂಗಣದಲ್ಲಿ 2011ರ ಏಕದಿನ ವಿಶ್ವಕಪ್ಅನ್ನು ಗೆದ್ದು ತಮ್ಮ ಕ್ರಿಕೆಟ್ ಜೀವನವನ್ನು ಸ್ಮರಣೀಯವಾಗಿಸಿದ್ದರು.