More

    ಭೂ ವ್ಯಾಜ್ಯ; ಉತ್ತರಪ್ರದೇಶ ರಾಜ್ಯಪಾಲರಿಗೆ ನೋಟಿಸ್​ ಜಾರಿ ಮಾಡಿದ SDM ಸೇವೆಯಿಂದ ಅಮಾನತು

    ಲಖನೌ: ಭೂವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣ ಒಂದರಲ್ಲಿ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್​ಗೆ ಸಮನ್ಸ್ ಜಾರಿ ಮಾಡಿದ ಆರೋಪದ ಮೇಲೆ ಬದೌನ್ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಹಾಗೂ ಅವರ ಆಪ್ತ ಕಾರ್ಯದರ್ಶಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

    SDM ವಿನೀತ್​ ಕುಮಾರ್​ ಹಾಗೂ ಅವರ ಆಪ್ತ ಸಹಾಯಕನನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಮನೋಜ್​ ಕುಮಾರ್ ತಿಳಿಸಿದ್ದಾರೆ.

    ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಲೋಡಾ ಬಃಏರಿ ಗ್ರಾಮದ ನಿವಾಸಿ ಚಂದ್ರಹಾಸ್​ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ಬದೌನ್​ ಜಿಲ್ಲಾ ಉಪ ಮ್ಯಾಜಿಸ್ಟ್ರೇಟ್​ ವಿನೀತ್​ ಕುಮಾರ್​ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್​ಗೆ ಸಮನ್ಸ್​ ನೀಡಲಾಗಿತ್ತು. ನೋಟಿಸ್​ ಜಾರಿ ಮಾಡಿದ ಬೆನ್ನಲ್ಲೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬದೌನ್​ ಜಿಲ್ಲಾಧಿಕಾರಿಗೆ ಪತ್ರ ಬರೆದು SDM ಕ್ರಮವನ್ನು ಖಂಡಿಸಿದ್ದರು.

    ಇದನ್ನೂ ಓದಿ: ತೆಲಂಗಾಣ: ಬಿಜೆಪಿ ಮೂರನೇ ಪಟ್ಟಿ ಪ್ರಕಟ, 35 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ, ಕಿಶನ್ ರೆಡ್ಡಿ ಹೆಸರಿಲ್ಲ?

    ಜಾರಿ ಮಾಡಿರುವ ನೋಟಿಸ್​ಗೆ ಸಂಬಂಧಿಸಿದಂತೆ ಗೌರವಾನ್ವಿತ ರಾಜ್ಯಪಾಲರು ಯಾವುದೇ ನ್ಯಾಯಾಲಯಕ್ಕೆ ಉತ್ತರದಾಯಿಗಳು ಅಲ್ಲ. ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠದ ಆದೇಶದ ಪ್ರಕಾರ ರಾಜ್ಯಪಾಲರಿಗೆ ಯಾವುದೇ ರೀತಿಯ ನೋಟಿಸ್​ ನೀಡುವಂತಿಲ್ಲ ಎಂದು SDM ಕ್ರಮವನ್ನು ಖಂಡಿಸಿ ಬದೌನ್​ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ SDM ಹಾಗೂ ಅವರ ಆಪ್ತ ಕಾರ್ಯದರ್ಶಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

    ಪ್ರಕರಣದ ಹಿನ್ನಲೆ

    ಲೋಡಾ ಬಹೇರಿ ಗ್ರಾಮದ ನಿವಾಸಿ ಚಂದ್ರಹಾಸ್​ ಅವರು ತಮ್ಮ ಸಂಬಂಧಿ ಕಠೋರಿ ದೇವಿ ಎಂಬುವವರಿಗೆ ಸೇರಿದ ಜಮೀನನ್ನು ಬೇರೊಬ್ಬರ ಹೆಸರಿಗೆ ಮಾಡಲಾಗಿದೆ. ಸರ್ಕಾರ ಆ ಭೂಮಿಯ ಒಂದಿಷ್ಟು ಭಾಗವನ್ನು ವಶಪಡಿಸಿಕೊಂಡಿದ್ದು, ಪರಿಹಾರವಾಗಿ 12 ಲಕ್ಷ ರೂಪಾಯಿ ಹಣವನ್ನು ನೀಡಿದೆ. ಆದರೆ, ಪರಿಹಾರದ ಮೊತ್ತವನ್ನು ಕಠೋರಿ ಅವರ ಖಾತೆಗೆ ವರ್ಗಾಯಿಸುವ ಬದಲು ಲೇಖರಾಜ್​ ಎಂಬುವವಿಗೆ ನೀಡಲಾಗಿದೆ ಎಂದು ಆರೋಪಿಸಿ SDM ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

    ಕಠೋರಿ ದೇವಿ ಮೃತಪಟ್ಟಿದ್ದು, ಅವರಿಗೆ ಸಂಬಂಧಿಸಿದ ಆಸ್ತಿ ಅವರು ಕಾಲವಾದ ನಂತರ ನನ್ನ ಹೆಸರಿಗೆ ವರ್ಗಾವಣೆಯಾಗಬೇಕಿತ್ತು. ಅದರೆ, ಅವರ ಜಮೀನು ನನ್ನ ಹೆಸರಿಗೆ ವರ್ಗಾವಣೆಯಾಗುವ ಬದಲು ಬೇರೆ ಅವರ ಹೆಸರಿಗೆ ಆಗಿದ್ದು, ಅದಕ್ಕೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ಲೇಖರಾಜ್​ ಎಂಬುವವರಿಗೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖರಾಜ್​, ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯಪಾಲರನ್ನು ಪ್ರತಿವಾದಿಗಳನ್ನಾಗಿಸಿ SDM ನೋಟಿಸ್​ ಜಾರಿ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೀಗ SDM ಹಾಗೂ ಅವರ ಆಪ್ತ ಕಾರ್ಯದರ್ಶಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts