More

    ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ; ನೈತಿಕ ಸಮಿತಿ ಸಭೆಯಿಂದ ಅರ್ಧದಲ್ಲೇ ಹೊರನಡೆದ ಸಂಸದೆ ಮಹುವಾ ಮೊಯಿತ್ರಾ

    ನವದೆಹಲಿ: ಸಂಸತ್​ ಅಧಿವೇಶನದ ವೇಳೆ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ನೀತಿ ಸಂಹಿತೆ ಸಮಿತಿ ವಿಚಾರಣೆಗೆ ಹಾಜರಾಗಿದ್ದ ತೃಣಮೂಲೆ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಸಭೆಯಿಂದ ಅರ್ಧದಲ್ಲೇ ಎದ್ದು ಹೊರನಡೆದಿದ್ದಾರೆ.

    ಸಭೆಯಿಂದ ಹೊರಬಂದು ಮಾತನಾಡಿದ ಮಹುವಾ, ವಿಚಾರಣೆ ಹೆಸರಲ್ಲಿ ವೈಯಕ್ತಿಕ ಹಾಗೂ ಇಲ್ಲಸಲ್ಲದ ಪ್ರಶ್ನಗೆಳನ್ನು ಕೇಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಅವರು ಅರ್ಧದಲ್ಲೇ ಹೊರನಡೆದಿದ್ದಾರೆ ಎಂದು ಸಮಿತಿ ಮುಖ್ಯಸ್ಥ ವಿನೋದ್ ಸೋಂಕರ್ ಆರೋಪಿಸಿದ್ದಾರೆ.

    ಇದನ್ನೂ ಓದಿ: ಭೂ ವ್ಯಾಜ್ಯ; ಉತ್ತರಪ್ರದೇಶ ರಾಜ್ಯಪಾಲರಿಗೆ ನೋಟಿಸ್​ ಜಾರಿ ಮಾಡಿದ SDM ಸೇವೆಯಿಂದ ಅಮಾನತು

    ಈ ಕುರಿತು ಮಾತನಾಡಿರುವ ಸಂಸದೆ ಮಹುವಾ ಮೊಯಿತ್ರಾ, ವಿಚಾರಣೆಯ ಹೆಸರಲ್ಲಿ ಅಸಭ್ಯಕರ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಯಾವುದೋ ವಿಚಾರವನ್ನು ತೆಗೆದುಕೊಂಡು ಇನ್ನೇನನ್ನೋ ಮಾತನಾಡುತ್ತಿದ್ದಾರೆ. ವಿಚಾರಣೆಗೆ ಬಮದು ನೀವು ಯಾಕೆ ಅಳುತ್ತಿದ್ದೀರಾ ಎಂದು ಸುಮ್ಮನೆ ಹೇಳುತ್ತಿದ್ದಾರೆ. ಆದರೆ, ನೀವುಗಳು ನನ್ನ ಕಣ್ಣಲ್ಲಿ ನೀರನ್ನು ನೋಡುತ್ತಿದ್ದೀರಾ ಎಂದು ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

    ಸಂಸದೆ ಮಹುವಾ ಮೊಯಿತ್ರಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಂಸದೀಯ ಸಮಿತಿ ಮುಖ್ಯಸ್ಥ ವಿನೋದ್ ಸೋಂಕರ್ ಅವರು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಆ ರೀತಿಯ ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಅರ್ಧದಲ್ಲೇ ಎದ್ದು ಹೋಗುವ ಮೂಲಕ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಂಸದೀಯ ಸಮಿತಿ ಮುಖ್ಯಸ್ಥ ವಿನೋದ್ ಸೋಂಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts