ಈ ಬಾರಿಯ IPL 2025ರ 18ನೇ ಆವೃತ್ತಿ ಕೊನೆ ಹಂತ ತಲುಪಿದ್ದು, ಇದಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಫೈನಲ್‌ಗೆ ತಲುಪಿದೆ. ಇನ್ನು ಇಂದು ನಡೆಯುವ (ಜೂ.1) ಕ್ವಾಲಿಫೈಯರ್-2ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೇ ಜಿದ್ದಾಜಿದ್ದಾಯ ಪಂದ್ಯ ನಡೆಯಲಿದ್ದು, ಯಾವ ತಂಡ ಫೈನಲ್‌ಗೆ ತಲುಪಲಿದೆ ಎಂಬ ಕೂತುಹಲ ಎಲ್ಲರಲ್ಲೂ ಇದೆ.
ಇದೀಗ ಮೂರು ತಂಡಗಳ ನಡುವೆ IPL 2025ರ ಟ್ರೋಫಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಅಲ್ಲದೆ, ಇಂದು ನಡೆಯುವ ಪಂದ್ಯದಲ್ಲಿ ಸೋತ ತಂಡ ಹೊರ ಬೀಳಲಿದೆ. ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜೂ.3ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕಪ್ ಯಾರ ಪಾಲಾಗಲಿದೆ ಎಂಬ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿ ಗರಿಗೆದರಿದೆ. ಇದರ ನಡುವೆ ಆಸ್ಟೇಲಿಯಾದ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮಾಜಿ ಆಟಗಾರ ಡೇವಿಡ್ ವಾರ್ನರ್ ಕಪ್ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಚಿರಂಜೀವಿ ಕಳುಹಿಸಿದ ಗಿಫ್ಟ್ ನೋಡಿ ಶಾಕ್ ಆದ ಕಾಮಿಡಿಯನ್ ಅಲಿ ದಂಪತಿ!: ಉಡುಗೊರೆ ಏನು ಗೊತ್ತೆ! | Comedian Ali
ಐಪಿಎಲ್ ಮೊದಲ ಆವೃತ್ತಿಯ ನಂತರ ಯಾವುದೇ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯಲ್ಲಿ ಉತ್ತಮವಾಗಿ ಕಾಣುತ್ತಿದೆ. ತಂಡದ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ - ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಡೇವಿಡ್ ವಾರ್ನರ್ ಭವಿಷ್ಯ ನುಡಿದು ಆರ್‌ಸಿಬಿ ಎಂದು ಹೆಸರಿಸಿದರು. "ಆರ್‌ಸಿಬಿ ಮತ್ತು ಜೋಶ್ ಹ್ಯಾಜಲ್‌ವುಡ್ ಪಂದ್ಯದ ಆಟಗಾರ ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.(ಏಜೆನ್ಸೀಸ್)