Bengaluru stampede: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಗೆಲುವಿನ ನಂತರ ನಡೆದ ವಿಜಯೋತ್ಸವದ ವಿಷಯದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದಾರೆ ಎಂದು ಕರ್ನಾಟಕ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು, ಅದಕ್ಕೆ ತಡೆ ನೀಡಬೇಕು ಎಂದು ವಾದಿಸಿದರು. ಕರ್ತವ್ಯ ಲೋಪವನ್ನು ಉಲ್ಲೇಖಿಸಿ ವಿಕಾಶ್ ಮತ್ತು ಇತರ ಐಪಿಎಸ್ ಅಧಿಕಾರಿಗಳ ಅಮಾನತು ಆದೇಶವನ್ನು ಕೇಂದ್ರ ಸರ್ಕಾರವೇ ಅನುಮೋದಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಂದಹಾಗೆ, ಜೂನ್ 5 ರಂದು ಅಧಿಕಾರಿಗಳ ಅಮಾನತು ಆದೇಶವನ್ನು ಹೊರಡಿಸಲಾಗಿತ್ತು.
ಇದನ್ನೂ ಓದಿ:ಆಸೀಸ್ ವಿರುದ್ಧದ ಟಿ20 ಸರಣಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಂಡ್ರೆ ರಸೆಲ್ ಗುಡ್ ಬೈ! Andre Russell
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯದ ಟಾಸ್‌ಗೆ ಮುಂಚೆಯೇ, ಆರ್‌ಸಿಬಿ ತಂಡವು ಪಂದ್ಯ ಗೆದ್ದರೆ ವಿಜಯೋತ್ಸವ ಆಚರಿಸುವ ಯೋಜನೆಗಳ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಅರ್ಜಿಯನ್ನು ನೀಡಿತ್ತು. ಪೊಲೀಸ್ ಅಧಿಕಾರಿಗಳು ಆರ್‌ಸಿಬಿಯ ಸೇವಕರಂತೆ ವರ್ತಿಸಿದರು ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದನ್ನು ಲೈವ್‌ಲಾ ಉಲ್ಲೇಖಿಸಿದೆ.
ಈ ಕಾರ್ಯಕ್ರಮಕ್ಕೆ ಯಾರು ಅನುಮತಿ ನೀಡಿದ್ದಾರೆಂದು ಪ್ರಶ್ನಿಸದೆ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ಮಾಡಲು ಪ್ರಾರಂಭಿಸಿದರು ಎಂದು ವಕೀಲರು ಹೇಳಿದರು.
ನೋಟಿಸ್ ನೀಡಿದ ಕೇವಲ 12 ಗಂಟೆಗಳಲ್ಲಿ ಬೃಹತ್ ಜನಸಮೂಹವನ್ನು ನಿರ್ವಹಿಸುವುದು ಅಸಾಧ್ಯವೆಂದು ಸರ್ಕಾರ ವಾದಿಸಿತು ಮತ್ತು ಅಧಿಕಾರಿಯ ಕ್ರಮಗಳನ್ನು ಪ್ರಶ್ನಿಸಿತು. ಅಷ್ಟು ಜನರು ಅಲ್ಲಿ ನೆರೆದಿದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದರು? ಪೊಲೀಸ್ ಕಾಯ್ದೆಯಡಿ ನಿಷೇಧಾಜ್ಞೆಗಳನ್ನು ಹೊರಡಿಸುವ ಬದಲು, ಅವರು ಆಚರಣೆಗೆ ಬಂದೋಬಸ್ತ್‌ನೊಂದಿಗೆ ಮುಂದುವರೆದರು ಎಂದು ರಾಜ್ಯ ಸರ್ಕಾರ ವಾದಿಸಿದೆ. (ಏಜೆನ್ಸೀಸ್)