ತನ್ನ ಉದುರಿದ ಕೂದಲನ್ನು ಸಂಗ್ರಹಿಸಿ ಹಣ ಸಂಪಾದಿಸುತ್ತಿರುವ ಯುವತಿ! ಕೂದಲನ್ನು ಸಂಗ್ರಹಿಸಿ ಕೋಟ್ಯಾಧಿಪತಿಯಾಗಬಹುದು ಎಂದ್ರು ನೆಟ್ಟಿಗರು.. money

hair sell
Published on

ನವದೆಹಲಿ: ( money ) ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯರು ಕೂದಲಿನ ಕುರಿತಾಗಿ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಉದುರುತ್ತಿರುವ ತನ್ನ ಕೂದಲನ್ನೇ ಬಳಸಿಕೊಂದು ಹಣ ಸಂಪಾದನೆ ಮಾಡುತ್ತಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಉದುರಿದ ಕೂದಲಿಗೆ ಭಾರಿ ಬೇಡಿಕೆ ಇದೆ. ಈ ಕುರಿತಾಗಿ ತಿಳಿದುಕೊಂಡ ಯುವತಿ 2 ವರ್ಷಗಳಿಂದ ಉದುರಿ ಹೋಗಿದ್ದ ತನ್ನ ಕೂದಲನ್ನು ಸಂಗ್ರಹಿಸಿ ಕೊನೆಗೆ ಅದನ್ನು ಮಾರಾಟ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸಿದ್ದಾಳೆ.

ಈ ವಿಡಿಯೋದಲ್ಲಿ ಏನಿದೆ?:

 ಒಬ್ಬ ಹುಡುಗಿ ಕಳೆದ ಎರಡು ವರ್ಷಗಳಿಂದ ಉದುರುತ್ತಿದ್ದ ತನ್ನ ಕೂದಲನ್ನು ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಸಂಗ್ರಹಿಸುತ್ತಾಳೆ. ಕೂದಲು ತುಂಬಿದ ನಂತರ, ಹುಡುಗಿ ಅದನ್ನು ತೂಕ ಮಾಡಿ ಮಾರುತ್ತಾಳೆ. ಪ್ರತಿಯಾಗಿ, ಅವಳಿಗೆ 190 ರೂ. ಸಿಗುತ್ತದೆ. ಅವಳು ಇಡೀ ಘಟನೆಯ ವೀಡಿಯೊ ಮಾಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ.

ಈ ವೀಡಿಯೊವನ್ನು being_earthfriendly ಎಂಬ ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಈ ವೀಡಿಯೊವನ್ನು ನೋಡಿದ ನಂತರ, ಜನರು ನಾವು ಹೀಗೆ ನನ್ನ ಕೂದಲನ್ನು ಸಂಗ್ರಹಿಸಿ ಮಾರಾಟ ಮಾಡಿದ್ದರೆ ಕೋಟ್ಯಾಧಿಪತಿ ಆಗುತ್ತಿದ್ದೇನು ಎಂದು  ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net