

Andre Russell : ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟರ್ ಆಂಡ್ರೆ ರಸೆಲ್ ಜುಲೈ 20ರಿಂದ ಆರಂಭವಾಗುವ ಅಸ್ಟ್ರೇಲಿಯಾ (Australia) ವಿರುದ್ಧದ ಟಿ20 ಸರಣಿ(T20 series) ಮುಗಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ (International cricket) ಗೆ ಗುಡ್ ಬೈ ಹೇಳಲಿದ್ದಾರೆ.
ನಿವೃತ್ತಿ ಬಗ್ಗೆ ಮಾತನಾಡಿದ ರಸೆಲ್, ವೆಸ್ಟ್ ಇಂಡೀಸ್ (West Indies) ತಂಡವನ್ನು ಪ್ರತಿನಿಧಿಸುವುದು ನನ್ನ ಜೀವನದ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ನಾನು ಚಿಕ್ಕವನಿದ್ದಾಗ, ಈ ಮಟ್ಟಕ್ಕೆ ತಲುಪುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ಆದರೆ, ನೀವು ಹೆಚ್ಚು ಆಟವಾಡಲು ಮತ್ತು ಕ್ರೀಡೆಯನ್ನು ಇಷ್ಟಪಡಲು ಪ್ರಾಂರಭಿಸಿದಾಗ, ನೀವು ಏನನ್ನು ಬೇಕಾದರು ಸಾಧಿಸಬಹುದು ಎಂಬುದನ್ನು ನೀವು ಅರಿತುಕೊಳ್ಳುತ್ತಿರಿ ಎಂದು ರಸೆಲ್ ಹೇಳಿದರು.
ಅಲ್ಲದೇ, ನಾನು ಇತರರಿಗೆ ಸ್ಪೂರ್ತಿಯಾಗಲು ಬಯಸಿದ್ದೆ. ನನಗೆ ವೆಸ್ಟ್ ಇಂಡೀಸ್ ಪರ ಆಡುವುದು ತುಂಬಾ ಇಷ್ಟ ಮತ್ತು ನನ್ನ ಕುಟುಂಬ ಮತ್ತು ಸ್ನೇಹಿತರ ಮುಂದೆ ಆಡುವುದನ್ನು ಇನ್ನೂ ಇಷ್ಟಪಡುತ್ತೇನೆ. ಕೆರಿಬಿಯನ್ನಿಂದ ಹೊರಬರುವ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಮಾದರಿಯಾಗಿ ನನ್ನ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದರು.
ಅಂದಹಾಗೆ, 2019ರ ನಂತರ ಟಿ20ಯಲ್ಲಿ 84 ಪಂದ್ಯಗಳನ್ನು ಆಡಿರುವ ರಸೆಲ್ 1078 ರನ್ಸ್ ಹಾಗೂ 61 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)