ಕ್ರೀಡೆ

ಸಚಿನ್ ತದ್ರೂಪಿ ಬಲ್ವೀರ್ ಚಂದ್ ನೌಕರಿಗೆ ಕುತ್ತು ತಂದ ಕರೊನಾ..!

ಮುಂಬೈ: ಕ್ರಿಕೆಟ್ ಅಭಿಮಾನಿಗಳು ಆತನನ್ನು ಸಚಿನ್ ಅಂತಾನೇ ಕರೆಯುತ್ತಾರೆ, ಸಚಿನ್ ಅವರ ಎಷ್ಟೊ ಜಾಹೀರಾತುಗಳನ್ನು ಈತನೇ ಡಬ್ ಮಾಡಿರೋದು. ಜನ ಕೂಡ ಸಚಿನ್ ಅಂತಾನೇ ಅಂದು ಕೊಂಡಿದ್ದರು. ಆದರೆ, ಇಂದು ಕರೊನಾ ವೈರಸ್ ಭೀತಿ ಆತನನ್ನು ಬಿಟ್ಟಿಲ್ಲ. ಜೀವನ ನಡೆಸಲು ಮಾಡುತ್ತಿದ್ದ ನೌಕರಿಗೂ ಕುತ್ತು ತಂದಿದೆ. ದಿಗ್ಗಜ ಸಚಿನ್ ತೆಂಡುಲ್ಕರ್ ತದ್ರೂಪಿ ಬಲ್ವೀರ್ ಚಂದ್ ಈಗ ಸಂಕಷ್ಟದ ಸಮಯ ದೂಡುತ್ತಿದ್ದಾರೆ.

ಸಚಿನ್ ತದ್ರೂಪಿ 50 ವರ್ಷದ ಬಲ್ವೀರ್ ಚಂದ್ ಕುಟುಂಬಕ್ಕೆ ಅವರೇ ಆಧಾರ, ಗೋಲಿ ವಡಾ ಪಾವ್ ನಂ.1 ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರು. ಆದರೆ, ಕರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಆದ ಪರಿಣಾಮ ಸಂಸ್ಥೆ ಹಲವು ಮಂದಿಯನ್ನು ಕೆಲಸದಿಂದ ವಜಾಗೊಳಿಸಿತು. ಇದರಿಂದ ಬಲ್ವೀರ್ ಚಂದ್‌ಗೂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಲ್ಲ ಸರಿಯಾದ ಮೇಲೆ ನನ್ನನ್ನು ಕರೆದು ನೌಕರಿ ಕೊಡಿ ಎಂದು ಕೇಳಿಕೊಂಡಿರುವೆ ಎಂದು ಬಲ್ವೀರ್ ಮನವಿ ಮಾಡಿಕೊಂಡಿದ್ದಾರೆ.

1999ರಲ್ಲಿ ಸಚಿನ್ ತದ್ರೂಪಿ ಬಲ್ವೀರ್ ಚಂದ್ ಅವರನ್ನು ಸುನೀಲ್ ಗಾವಸ್ಕರ್, ಟೆಸ್ಟ್ ಪಂದ್ಯವೊಂದರ ವೇಳೆ ಕಾಮೆಂಟರಿ ಬಾಕ್ಸ್‌ಗೆ ಕರೆದೊಯ್ದರಂತೆ. ಹಳಿಕ ತಾಜ್ ಹೋಟೆಲ್‌ನಲ್ಲಿ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ,  ಫೋಟೋ ಹಾಗೂ ಆಟೋ ಗ್ರಾಫ್ ಪಡೆದುಕೊಂಡೆ. ನೀವು ನನ್ನ ಫೋಟೋಗಳು ನಿಮ್ಮದಲ್ಲ ಅಂತ ಹೇಳಿದೆ, ಆಗ ಸಚಿನ್ ಶಾಕ್ ಆದರು ಎಂದು ಮೆಲುಕು ಹಾಕುತ್ತಾರೆ ಬಲ್ವೀರ್ ಚಂದ್. ಬಳಿಕ ಎಂಆರ್‌ಎಫ್, ರೇಮಂಡ್ಸ್, ಟಿವಿಎಸ್ ಸೇರಿದಂತೆ ಹಲವು ಜಾಹೀರಾತುಗಳಲ್ಲಿ ಬಲ್ವೀರ್ ಚಂದ್, ಸಚಿನ್‌ಗೆ ಡಬ್ ಮಾಡಿದ್ದಾರೆ.