ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬಿರಿದ್ದು, ಚೆನ್ನೈ ಸೂಪರ್ಕಿಂಗ್ಸ್ಗೆ ಸೋಲುಣಿಸುವ ಮೂಲಕ ಟೂರ್ನಿಯಿಂದ ಹೊರದಬ್ಬಿದೆ. ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ದ್ವತಿಯಾರ್ಧದಲ್ಲಿ ಮಾಡಿದ ಕಮ್ಬ್ಯಾಕ್ ಐಪಿಎಲ್ನ ಚಿತ್ರಣವನ್ನೇ ಬದಲಿಸಿತ್ತು. ಇನ್ನೂ ಪಂದ್ಯದ ವೇಳೆ ನಡೆದ ಘಟನೆಯೊಂದು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಪಂದ್ಯ ಮುಗಿದ ಬಳಿಕ ಆರ್ಸಿಬಿ ಆಟಗಾರರು ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ಸೂಚಿಸಿಲ್ಲ. ಇದು ಅವರ ಕೊನೆಯ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿಯೂ ಆಟಗಾರರು ಹ್ಯಾಂಡ್ ಶೇಕ್ ಸಹ ಮಾಡಿಲ್ಲ ಎಂದು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮೈಕೆಲ್ ವಾಗನ್ ಹಾಗೂ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ನೀವು ವಿಶ್ವಕಪ್ ಗೆದ್ದರೂ ಪರ್ವಾಗಿಲ್ಲ. ಆದರೆ, ಪಂದ್ಯ ನಡೆದಾಗ ಎದುರಾಳಿ ತಂಡದ ಸದಸ್ಯನ ಜೊತೆ ಹ್ಯಾಂಡ್ ಶೇಕ್ ಮಾಡುತ್ತೀರಿ. ಹೀಗೆ ಮಾಡಿದರೆ ಪಂದ್ಯ ಮುಗಿದಿದ್ದೆ ಮತ್ತು ನಮ್ಮ ನಡುವಿನ ಮುನಿಸು ಅಂತ್ಯವಾಗಿದೆ ಎಂದರ್ಥ. ಆರ್ಸಿಬಿ ಆಟಗಾರರು ಧೋನಿ ಔಟಾದ ಬಳಿಕ ಅವರ ಬಳಿ ಹ್ಯಾಂಡ್ ಶೇಖ್ ಮಾಡಬಹುದಿತ್ತು. ಆದರೆ, ಆರ್ಸಿಬಿ ಆಟಗಾರರು ಹಾಗೆ ಮಾಡಲಿಲ್ಲ ಈ ರೀತಿಯ ಕ್ರಮ ಸರಿಯಲ್ಲ ಎಂದು ಇವರಿಬ್ಬರು ಕಿಡಿಕಾರಿದ್ದಾರೆ.
ಗಮನಾರ್ಹವೆಂದರೆ, ಧೋನಿ ಸಿಎಸ್ಕೆ ಸೋಲಿನ ಬಳಿಕ ಆರ್ಸಿಬಿ ಡಗೌಟ್ಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಹಸ್ತಲಾಘನ ಮಾಡಿದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.