ಕ್ರೀಡೆ

ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

ಬೆಂಗಳೂರು: ಇಂಡಿಯನ್​ ಪ್ರೀಮಿಯರ್ ಲೀಗ್ (IPL) 2024ರ ಸೀಸನ್​ ಆರಂಭಗೊಂಡ ಮೊದಲ ದಿನದಿಂದಲು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವೇ ಹರಿದುಬರುತ್ತಿದೆ. ಕಿಕ್​ಸ್ಟಾರ್ಟ್​ ಪಂದ್ಯದಿಂದ ಹಿಡಿದು ಇಂದಿನ ಪಂದ್ಯದವರೆಗೂ ಎಲ್ಲವೂ ಸೀಟಿನ ತುದಿಗೆ ಕರೆದೊಯ್ಯುವಂತ ಮ್ಯಾಚ್​ ಆಗಿ ಬದಲಾಗುತ್ತಿವೆ. ಈ ಆವೃತ್ತಿಯಲ್ಲಿ ಇಲ್ಲಿಯವೆರೆಗೆ ನಡೆದಿರುವ ಒಟ್ಟು 17 ಪಂದ್ಯಗಳು ಸಹ ರೋಚಕವಾಗಿ ಮೂಡಿಬಂದಿವೆ.

ರೋಚಕವಾಗಿ ನಡೆಯುತ್ತಿರುವ ಪಂದ್ಯಗಳ ಪೈಕಿ ಫಾಫ್​ ಡು ಪ್ಲೆಸಿಸ್ ಕ್ಯಾಪ್ಟನ್ಸಿಯ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮಾತ್ರ ಗೆಲುವಿನಿಂದ ಬಹಳ ದೂರ ಉಳಿಯುತ್ತಿದೆ. ಪಂದ್ಯದ ಮೊದಲು ಒಳ್ಳೆಯ ಸ್ಟಾರ್ಟ್​ ತೆಗೆದುಕೊಂಡು ಹೋದರು ಸೆಕೆಂಡ್ ಹಾಫ್​ನಲ್ಲಿ ಎಡವುತ್ತಿದೆ. ಇದಕ್ಕೆ ಪ್ರಮುಖ ಕಾರಣವೇನು ಎಂಬುದು ಈಗಾಗಲೇ ಕ್ರಿಕೆಟ್ ಅಭಿಮಾನಿಗಳಿಗು ತಿಳಿದಿದೆ, ಆರ್​ಸಿಬಿ ಬಳಗಕ್ಕೂ ಚೆನ್ನಾಗಿ ಗೊತ್ತಿದೆ.

ಆರಂಬಿಕ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಮೊದಲ ಸೋಲನ್ನು ಅನುಭವಿಸಿದ ಆರ್​ಸಿಬಿ, ಎರಡನೇ ಮ್ಯಾಚ್​ನಲ್ಲಿ ಪಂಜಾಬ್​ ವಿರುದ್ಧ ಗೆದ್ದಿದ್ದು ಬಿಟ್ಟರೆ ಉಳಿದ ಪಂದ್ಯಗಳನ್ನು ಕೊನೆ ಕ್ಷಣಗಳಲ್ಲಿ ಕೈಚೆಲ್ಲಿಕೊಂಡಿದೆ. ಇಡೀ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ, ಲಾಯಲ್​ ಫ್ಯಾನ್ಸ್ ಬಳಗ ಹೊಂದಿರುವ ಟೀಮ್​ ಯಾವುದಾದರೂ ಇದ್ದರೆ ಅದು ಆರ್​ಸಿಬಿ ಮಾತ್ರ. ಸ್ಟೇಡಿಯಂನ ಒಂದು ಸೀಟನ್ನು ಬಿಡದೆ ಆವರಿಸಿಕೊಳ್ಳುವ ಈ ಅಭಿಮಾನಿಗಳು, ಇದೀಗ ತೀವ್ರ ಅಸಮಾಧಾನ, ದುಃಖವನ್ನು ಹೊರಹಾಕಿದ್ದಾರೆ.

ಇದಕ್ಕೆ ಬಲವಾದ ಕಾರಣ ಆರ್​ಸಿಬಿ ಆಟಗಾರರು ಕೊಡುತ್ತಿರುವ ಕೆಟ್ಟ ಪ್ರದರ್ಶನ. ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುತ್ತಿರುವ ತಂಡಕ್ಕೆ ಒಬ್ಬರ ಶ್ರಮ ಸಾಲಲ್ಲ, ಇಡೀ ತಂಡವೇ ಸಾಥ್ ಕೊಡಬೇಕು ಎನ್ನುವುದು ಫ್ಯಾನ್ಸ್ ಅಭಿಪ್ರಾಯ. ಕೇವಲ ವಿರಾಟ್ ಕೊಹ್ಲಿ ಆಡಿದ್ರೆ, ಮ್ಯಾಚ್ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. 11.5 ಕೋಟಿ ಕೊಟ್ಟು ಅಲ್ಜಾರಿ ಜೋಸೆಫ್ ಖರೀದಿಸಿದ ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಯಾರನ್ನು ಕಣಕ್ಕಿಳಿಸಬೇಕು ಎಂಬುದೇ ಸರಿಯಾಗಿ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಆರ್​ಸಿಬಿ ತಂಡದಲ್ಲಿ ಉತ್ತಮ ಬೌಲಿಂಗ್ ಲೈನ್ ಇಲ್ಲ. ಇತರೆ ಟೀಮ್​ಗಳಲ್ಲಿ ಇರುವ ಒಳ್ಳೆಯ ಆಯ್ಕೆ ಪ್ರಕ್ರಿಯೆ ನಮ್ಮ ತಂಡದ ಮ್ಯಾನೆಜ್​ಮೆಂಟ್​ನವರಲ್ಲಿ ಯಾಕಿಲ್ಲ. ಕನ್ನಡಿಗ ವಿಜಯ್​ಕುಮಾರ್ ವೈಶಾಕ್​ನ ಆಡಿಸುವ ಬದಲಿಗೆ ಆಡದ ಆಟಗಾರರಿಗೆ ಅವಕಾಶ ಕೊಡುತ್ತಿರುವುದು ಸರಿಯಲ್ಲ. ನಮಗೆ ತಿಳಿಯುತ್ತಿರುವುದು ಈ ಮ್ಯಾನೆಜ್​ಮೆಂಟ್​ನವರಿಗೆ ಏಕೆ ಗೊತ್ತಾಗ್ತಿಲ್ಲ. ಇವರು ಬುದ್ದಿ ಕಲಿತ್ತಿಲ್ಲ, ಬದಲಾವಣೆ ಮಾಡ್ತಿಲ್ಲ. ಇದು ಹೀಗೆ ಮುಂದುವರಿದ್ರೆ ನಾವ್ಯಾರು ಮುಂದಿನ ಪಂದ್ಯಕ್ಕೆ ಸ್ಟೇಡಿಯಂಗೆ ಹೋಗದೆ, ಅವರಿಗೆ ಬುದ್ದಿ ಕಲಿಸಬೇಕಾಗುತ್ತದೆ ಎಂದು ಫ್ಯಾನ್ಸ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.