More

    ನೆಟ್ಟಿಗರ ನಿದ್ದೆಗೆಡಿಸುತ್ತಿರುವ ಕಾವ್ಯ ಮರನ್ ಯಾರು? ಈಕೆಗೂ ರಾಜಕೀಯಕ್ಕೂ ಇದೆ ನಂಟು!

    ಹೈದರಾಬಾದ್​: ಐಪಿಎಲ್​ 2024ರ ಆವೃತ್ತಿ ಪ್ರಾರಂಭವಾಗಿ ಇಂದಿಗೆ 14 ದಿನಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಆಡಿರುವ ಅಷ್ಟು ಪಂದ್ಯಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡ ಅದ್ಬುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುತ್ತಿದೆ. ತಂಡದಲ್ಲಿನ ಆಟಗಾರರು ಉತ್ಸಾಹದಿಂದ ಆಡಲು ಮಾಲೀಕರಾದ ಕಾವ್ಯ ಮರನ್ ಕೂಡ ಪ್ರಮುಖ ಕಾರಣ ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಒಂದೆಡೆ ಇದು ನಿಜವೇ! ಯಾಕಂದ್ರೆ, ಪ್ರತಿ ಮ್ಯಾಚ್​ನಲ್ಲಿಯೂ ಸ್ಟಾಂಡ್ಸ್​​ನಲ್ಲಿ ಕುಳಿತು ಟೀಮ್​ನ ಹುರಿದುಂಬಿಸುವಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಕಾವ್ಯ.

    ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ರಂಗವಲ್ಲಿ        ಮತಜಾಗೃತಿ ಮೂಡಿಸಿದ ಕಲಾಕೃತಿಗಳು

    ಕಳೆದ ವರ್ಷ ಏಪ್ರಿಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಓ ಹಾಗೂ ಸಹ-ಮಾಲೀಕರಾದ ಕಾವ್ಯ ಮರನ್‌ ಕ್ಯಾಮೆರಾಮ್ಯಾನ್​ ಕಣ್ಣಿಗೆ ಬಿದ್ದು ಎಲ್ಲರ ಹೃದಯವನ್ನು ಕದ್ದಿದ್ದರು. ಕ್ಯಾಮೆರಾಮ್ಯಾನ್​ ಮಾಡಿದ ಎಡವಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾವ್ಯ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಐಪಿಎಲ್​ ಪಂದ್ಯಗಳಿಗಿಂತಲೂ ಮಾಲೀಕಿಯನ್ನು ನೋಡಲು ಕ್ರಿಕೆಟ್ ಫ್ಯಾನ್ಸ್​ ಕಾದು ಕುಳಿತ್ತಿದ್ದರು. ಈಕೆ ಯಾರು, ಎಲ್ಲಿಂದ ಬಂದವರು? ನೋಡುವ ನೋಟದಲ್ಲೇ ನಮ್ಮನ್ನು ಸೆಳೆಯುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಿಸಿದ್ದರು.

    ಕಳೆದ ವರ್ಷ ಬ್ಯಾಕ್​ ಟು ಬ್ಯಾಕ್​ ತನ್ನನ್ನೇ ಕೇಂದ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ನ ಕಾಟಕ್ಕೆ ಸಾಕಾಗಿದ್ದ ಕಾವ್ಯಾ ಇದೀಗ ಅದೇ ಕ್ಯಾಮೆರಾಗೆ ಹೆಚ್ಚು ಪೋಸ್​​ ಕೊಡುತ್ತಾರೆ. ಈ ಮೂಲಕ ಎಸ್​ಆರ್​ಎಚ್​ ಪಂದ್ಯಗಳಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಕಾವ್ಯಾ ಮರನ್ ಯಾರು? ಈಕೆಯ ಒಟ್ಟು ನಿವ್ವಳ ಮೌಲ್ಯದ ಆಸ್ತಿ ಎಷ್ಟಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಇದನ್ನೂ ಓದಿ: ‘ಫೀಲ್ಡ್​ನಲ್ಲಿ ವಿರಾಟ್ ಮಗುವಿನಂತೆ’: ಕೊಹ್ಲಿ ಜತೆಗಿನ ಒಡನಾಟ ನೆನೆದ ಗ್ಲೆನ್ ಮ್ಯಾಕ್ಸ್‌ವೆಲ್

    ಕಾವ್ಯಾ ಮಾರನ್ ತಂದೆ, ಒಬ್ಬ ಬಿಲಿಯನೇರ್. ಮಾಧ್ಯಮ ಮೊಗಲ್ ಮತ್ತು ಸನ್ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಕಲಾನಿತಿ ಮಾರನ್ ಅವರ ಪುತ್ರಿ. 2018ರಲ್ಲಿ ಎಸ್​ಆರ್​ಎಚ್ ಫ್ರಾಂಚೈಸಿಯ ಸಿಇಓ ಆಗಿ ನೇಮಕಗೊಂಡ ಕಾವ್ಯ ಮಾರನ್ ಅದರ ಸಹ ಮಾಲೀಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

    ಕುಟುಂಬ ಮತ್ತು ಹಿನ್ನೆಲೆ: ಆಗಸ್ಟ್ 6, 1992ರಂದು ಚೆನ್ನೈನಲ್ಲಿ ಕಲಾನಿತಿ ಮತ್ತು ಕಾವೇರಿ ಮಾರನ್ ದಂಪತಿಗೆ ಜನಿಸಿದ ಕಾವ್ಯ, ಹಲವಾರು ಪ್ರಖ್ಯಾತ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಬಲ ಮತ್ತು ಪ್ರಭಾವಶಾಲಿ ಕುಟುಂಬದಲ್ಲಿ ಜನಿಸಿದ್ದಾರೆ. ಆಕೆಯ ತಾಯಿ ಕಾವೇರಿ ಮಾರನ್, ಸೋಲಾರ್ ಟಿವಿ ಕಮ್ಯುನಿಟಿ ರಿಸ್ಟ್ರಿಕ್ಟೆಡ್‌ನ ಸಿಇಓ ಆಗಿದ್ದು, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿಗಳಲ್ಲಿ ಒಬ್ಬರು.

    ಇದನ್ನೂ ಓದಿ: ಲೋಕ ಸಮರ 2024: ಕಾಂಗ್ರೆಸ್​ನಿಂದ ಪ್ರಣಾಳಿಕೆ ಬಿಡುಗಡೆ​, ನಿರುದ್ಯೋಗ, ಜಾತಿ ಗಣತಿಗೆ ಒತ್ತು

    ಆಕೆಯ ಕುಟುಂಬದಲ್ಲಿ ಇನ್ನೂ ಹಲವಾರು ಹೆಸರಾಂತ ರಾಜಕಾರಣಿಗಳಿದ್ದಾರೆ. ಕಾವ್ಯಾ ಅವರ ಚಿಕ್ಕಪ್ಪ, ದಯಾನಿಧಿ ಮಾರನ್, ಡಿಎಂಕೆ ಪಕ್ಷದೊಂದಿಗೆ ಸಂಬಂಧ ಹೊಂದಿರುವ ರಾಜಕಾರಣಿ. ಅದಲ್ಲದೆ, ಆಕೆಯ ತಂದೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತುವೇಲ್ ಕರುಣಾನಿಧಿ ಅವರ ಮೊಮ್ಮಗ ಎಂಬುದು ಗಮನಾರ್ಹ ಸಂಗತಿ.

    ಪ್ರಮುಖ ಹಿನ್ನೆಲೆಯಿಂದ ಬಂದಿರುವ ಕಾವ್ಯ ಅವರ ಒಟ್ಟುನಿವ್ವಳ ಮೌಲ್ಯವು ಭಾರೀ ದೊಡ್ಡದಾಗಿದೆ. ಜನ್ ಭಾರತ್ ಟೈಮ್ಸ್ ಪ್ರಕಾರ, ಕಾವ್ಯ ಮಾರನ್ ಅವರ ನಿವ್ವಳ ಮೌಲ್ಯ 50 ಮಿಲಿಯನ್ ಡಾಲರ್​ ಅಂದರೆ ಅಂದಾಜು 409 ಕೋಟಿ ರೂ.,(ಏಜೆನ್ಸೀಸ್).

    ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts