More

    ‘ಫೀಲ್ಡ್​ನಲ್ಲಿ ವಿರಾಟ್ ಮಗುವಿನಂತೆ’: ಕೊಹ್ಲಿ ಜತೆಗಿನ ಒಡನಾಟ ನೆನೆದ ಗ್ಲೆನ್ ಮ್ಯಾಕ್ಸ್‌ವೆಲ್

    ಬೆಂಗಳೂರು: ಐಪಿಎಲ್ 2024ರಲ್ಲಿ ಉತ್ತಮ ಆರಂಭ ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸಹ ಆಟಗಾರ ಹಾಗೂ ಮಾಜಿ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಬಗ್ಗೆ ಒಂದಷ್ಟು ವಿಷಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಬಾರಿಯ ಸೀಸನ್​ನ ಮೊದಲ ಪಂದ್ಯದಲ್ಲೇ ಎಡವಿದ ಆರ್​ಸಿಬಿ ಒಂದು ಪಂದ್ಯವನ್ನು ಬಿಟ್ಟರೆ ಉಳಿದ ಮೂರು ಮ್ಯಾಚ್​ಗಳನ್ನು ಕೈಚೆಲ್ಲಿದೆ. ಇದು ಅಭಿಮಾನಿಗಳಿಗೆ ಕೂಡ ಭಾರೀ ಬೇಸರ ತಂದಿದೆ.

    ಇದನ್ನೂ ಓದಿ: ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 05/04/2024

    ಮುಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಲು ಆರ್​ಸಿಬಿ ಆಟಗಾರರು ಭಾರೀ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಆರ್​ಸಿಬಿಯ ಸ್ಪೋಟಕ ಬ್ಯಾಟ್ಸ್​ಮನ್​ ಮ್ಯಾಕ್ಸ್​​ವೆಲ್​ ತಮ್ಮ ಆಪ್ತ ಸ್ನೇಹಿತ ವಿರಾಟ್​ ಕೊಹ್ಲಿ ಜತೆಗಿನ ಸ್ನೇಹದ ಬಗ್ಗೆ ಕೆಲವು ಹೇಳದ ಸಂಗತಿಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. 2021ರಲ್ಲಿ ತಂಡಕ್ಕೆ ಸೇರಿದಾಗಿನಿಂದ ತಂಡಕ್ಕೆ ಆಡುತ್ತಿರುವ ಈ ಇಬ್ಬರು ಉತ್ತಮ ಸೌಹಾರ್ದತೆ ಮತ್ತು ಪರಸ್ಪರ ಉತ್ತಮ ಬಾಂಧವ್ಯವತೆ ಹೊಂದಿದ್ದಾರೆ.

    “ವಿರಾಟ್​ ಸ್ಟೇಡಿಯಂನ ಸುತ್ತಲೂ ಓಡಾಡುತ್ತಾರೆ. ಮೈದಾನದಲ್ಲಿ ಅವರು ಮಗುವಿನಂತೆ ಇರ್ತಾರೆ. ಗ್ರೌಂಡ್​ನಲ್ಲಿದ್ದಾಗ ಕೊಹ್ಲಿ ಬೌನ್ಸ್​ ಬ್ಯಾಕ್ ಮಾಡುವುದನ್ನು ನೋಡುವುದೇ ತಮಾಷೆಯಾಗಿರುತ್ತದೆ. ನಾನು ಆಗಾಗ್ಗೆ ಹೇಳುತ್ತಿರುತ್ತೀನಿ ನಮ್ಮ ವಯಸ್ಸನ್ನು ನೆನಪಿಸಿಕೊಳ್ಳಿ ಅಂತ….ಆದರೆ, ವಿರಾಟ್ ಕೇಳಬೇಕಾ? ಎಂದು ನಗು ಚೆಲ್ಲಿದ್ದಾರೆ.

    ಇದನ್ನೂ ಓದಿ: ಮನೆ ಕಟ್ಟುವವರಿಗೆ ಶುಭ ಸುದ್ದಿ: ದುಬಾರಿ ಮರಳಿಗೆ ಬದಲು ಅಗ್ಗದ ಬದಲಿ ವಸ್ತು ಕಂಡುಹಿಡಿದ ವಿಜ್ಞಾನಿಗಳು!

    ಸಾಮಾನ್ಯವಾಗಿ ವಿರಾಟ್ ಬ್ಯಾಟಿಂಗ್ ಅಥವಾ ಫೀಲ್ಡಿಂಗ್​ಗೆ ಬಂದಾಗ ಹೆಚ್ಚು ತಮಾಷೆಯ ಮನಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್‌ನಲ್ಲಿ ನಡೆದ ಆರಂಭಿಕ ಪಂದ್ಯದ ವೇಳೆಯಲ್ಲಿಯೂ ಸಹ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುವಾಗ ‘ಅಪ್ಪಾಡಿ ಪೋಡು’ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು,(ಏಜೆನ್ಸೀಸ್).

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts