More

    ಮನೆ ಕಟ್ಟುವವರಿಗೆ ಶುಭ ಸುದ್ದಿ: ದುಬಾರಿ ಮರಳಿಗೆ ಬದಲು ಅಗ್ಗದ ಬದಲಿ ವಸ್ತು ಕಂಡುಹಿಡಿದ ವಿಜ್ಞಾನಿಗಳು!

    ಮನೆ ಕಟ್ಟುವುದು ಅಂದರೆ ದುಬಾರಿ ವೆಚ್ಚದ ಕೆಲಸ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಮನೆಗಳನ್ನು ನಿರ್ಮಾಣ ಮಾಡಲು ಸಿಮೆಂಟ್, ಇಟ್ಟಿಗೆ, ಕಬ್ಬಿಣದ ಜತೆಗೆ ಮರಳಿಗೂ ಸಾಕಷ್ಟು ಹಣ ಖರ್ಚಾಗುತ್ತದೆ. ಆದಾಗ್ಯೂ, ಪ್ರಸ್ತುತ ಸಮಯದಲ್ಲಿ ನಗರೀಕರಣ ಮತ್ತು ಕಟ್ಟಡ ನಿರ್ಮಾಣಗಳು ಹಂತಹಂತವಾಗಿ ವಿಸ್ತರಣೆಯಾಗುತ್ತಿದ್ದು, ನಿರ್ಮಾಣ ಅಗತ್ಯಗಳಿಗೆ ಅನುಗುಣವಾಗಿ ಮರಳಿನ ಬೇಡಿಕೆಯೂ ಸಹ ಹೆಚ್ಚಾಗಿದೆ. ಈ ಕ್ರಮದಲ್ಲಿ ಒಂದು ಟ್ರ್ಯಾಕ್ಟರ್ ಮರಳು 4 ರಿಂದ 6 ಸಾವಿರ ರೂ. ವೆಚ್ಚವಾಗುತ್ತಿದೆ.

    ಮಾರುಕಟ್ಟೆಯಲ್ಲಿ ಮರಳಿನ ಬೆಲೆ ಹೆಚ್ಚಿರುವುದರಿಂದ ಅದಕ್ಕೆ ಪರ್ಯಾಯವಾಗಿ ಖರೀದಿಸಲು ಸಾಧ್ಯವಾಗದೆ ಜನರು ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳು ಇತ್ತೀಚೆಗೆ ನೈಸರ್ಗಿಕ ಮರಳಿನ ಬದಲಿಗೆ ಮನೆ ನಿರ್ಮಾಣಗಳಿಗೆ ಬಳಸಬಹುದಾದ ಪರ್ಯಾ ವಸ್ತುವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಮರಳಿನ ಅಗತ್ಯವಿಲ್ಲದೆ ಮನೆಗಳನ್ನು ನಿರ್ಮಿಸಬಹುದು.

    ಪ್ರಸ್ತುತ ಕಟ್ಟಡ ನಿರ್ಮಾಣಗಳು ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಮರಳಿನ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದೆ. ಇವುಗಳ ಬೆಲೆಯಿಂದ ಜನ ಚಿಂತಾಕ್ರಾಂತರಾಗಿದ್ದಾರೆ. ಹೀಗಿರುವಾಗ ಕಾಂಕ್ರೀಟ್ ಮಿಕ್ಸಿಂಗ್​ನಲ್ಲಿ ಮರಳಿಗೆ ಪರ್ಯಾಯವಾಗಿ ಇನ್ನೇನಾದರೂ ಸಿಗಬಹುದು ಎಂಬ ಆಲೋಚನೆಯೊಂದಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ಸೆಂಟರ್ ಫಾರ್ ಸಸ್ಟೈನಬಲ್ (ಸಿಎಸ್​ಟಿ) ಕೇಂದ್ರದ ವಿಜ್ಞಾನಿಗಳು ಸಂಶೋಧನೆಗೆ ಮುಂದಾಗಿದ್ದು, ತಮ್ಮ ಪ್ರಯತ್ನದಲ್ಲಿ ಮರಳಿನ ‘ಬದಲಿ ವಸ್ತುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಕೈಗಾರಿಕ ಕೈಗಾರಿಕಾ ತ್ಯಾಜ್ಯ ಅನಿಲಗಳಿಂದ ಪಡೆದ ಕಾರ್ಬನ್​ ಡೈಯಾಕ್ಸೈಡ್​​ (ಸಿಒ2), ಅಗೆದ ಮಣ್ಣು ಮತ್ತು ನಿರ್ಮಾಣ ತ್ಯಾಜ್ಯಗಳಿಂದ ಬದಲಿ ಮರಳನ್ನು ಕಂಡುಹಿಡಿಯಲಾಗಿದೆ. ವಿಶೇಷ ವಿಧಾನಗಳ ಮೂಲಕ ಇಂಗಾಲದ ಡೈಆಕ್ಸೈಡ್ ಅನ್ನು ಮಣ್ಣು ಮತ್ತು ನಿರ್ಮಾಣ ತ್ಯಾಜ್ಯಕ್ಕೆ ಬೆರೆಸುವ ಮೂಲಕ ಮರಳಿನ ಪರ್ಯಾಯ ವಸ್ತುವನ್ನು ರಚಿಸಲಾಗಿದೆ. ಈ ವಸ್ತುವನ್ನು ಬಳಸಿದರೆ, ಮನೆಗಳು ಅಥವಾ ಕಟ್ಟಡಗಳು ನೈಸರ್ಗಿಕ ಮರಳಿಗಿಂತ 20 ರಿಂದ 22 ಪ್ರತಿಶತದಷ್ಟು ಬಲವಾಗಿರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಸ್ತುವನ್ನು ಸ್ವಲ್ಪ ಮಟ್ಟಿಗೆ ನೈಸರ್ಗಿಕ ಮರಳಿಗೆ ಪರ್ಯಾಯವಾಗಿ ಬಳಸಬಹುದು, ಇದರಿಂದ ಮರಳಿನ ಬಳಕೆಯನ್ನು ಕಡಿಮೆ ಮಾಡಿ ಪರಿಸರಕ್ಕೆ ಅನುಕೂಲವಾಗುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

    ಸಹಾಯಕ ಪ್ರಾಧ್ಯಾಪಕ ಸೌರದೀಪ್ ಗುಪ್ತಾ ಈ ಹೊಸ ಆವಿಷ್ಕಾರದ ಉಸ್ತುವಾರಿ ವಹಿಸಿದ್ದು, ದೇಶದ ಶೂನ್ಯ ಕಾರ್ಬನ್​ ಗುರಿಗಳಿಗೆ ಅನುಗುಣವಾಗಿ ಕಡಿಮೆ ಇಂಗಾಲದ ಕಟ್ಟಡ ಉತ್ಪನ್ನಗಳನ್ನು ತಯಾರಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಈ ಆವಿಷ್ಕಾರ ಯಶಸ್ವಿಯಾದರೆ, ಅನೇಕ ಜನರು ಪ್ರಯೋಜನ ಪಡೆಯುತ್ತಾರೆ. ಏಕೆಂದರೆ ಕನಿಷ್ಠ ಒಂದು 2BHK ಮನೆ ಕಟ್ಟಲು 30 ಟನ್ ಮರಳು ಬೇಕಾಗುತ್ತದೆ. ಹಾಗಾಗಿ ಈ ಆವಿಷ್ಕಾರದೊಂದಿಗೆ ಮರಳನ್ನು ಬದಲಾಯಿಸಿದರೆ, ಸ್ವಲ್ಪ ಮಟ್ಟಿಗೆ ವೆಚ್ಚ ಕಡಿಮೆಯಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ಹಾರ್ದಿಕ್​ ನಾಯಕತ್ವದ ಬಗ್ಗೆ ಅಸಮಾಧಾನ! ಮುಂಬೈ ಇಂಡಿಯನ್ಸ್​ಗೆ ರೋಹಿತ್​ ಶರ್ಮ ಗುಡ್​ಬೈ?

    ಏನ್… ನಿನ್ನ ಫೇಸಬುಕ್ ಅಕೌಂಟ್ ಹ್ಯಾಕ್ ಆಗೇದಂತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts