ನವದೆಹಲಿ: ಭಾರತದ ಯುವ ಚೆಸ್ ಚಾಂಪಿಯನ್ ಆರ್. ಪ್ರಜ್ಞಾನಂದ ಇತ್ತೀಚೆಗೆ ನಡೆದ ಎಫ್‌ಐಡಿಇ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಜಗತ್ತಿನ ಕೋಟ್ಯಂತರ ಜನರನ್ನು ತಮ್ಮತ್ತ ಸೆಳೆದಿದ್ದರು. ಅವರ ಈ ಪೈಪೋಟಿಯಲ್ಲಿ ಅವರಷ್ಟೇ ಅಥವಾ ಅವರಿಗಿಂತ ತುಸು ಹೆಚ್ಚೇ ಗಮನ ಸೆಳೆದವರು ಅವರ ತಾಯಿ ನಾಗಲಕ್ಷ್ಮಿ.
ಇದೀಗ ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮಿ ಹಾಗೂ ತಂದೆ ರಮೇಶ್ ಬಾಬು ಅವರಿಗೆ ಭರ್ಜರಿ ಕೊಡುಗೆಯೊಂದು ಘೋಷಣೆ ಆಗಿದ್ದು, ಶೀಘ್ರದಲ್ಲೇ ಅದು ಅವರ ಮನೆ ತಲುಪುವ ಸಾಧ್ಯತೆ ಇದೆ. ಅಂಥ ಒಂದು ಕೊಡುಗೆಯನ್ನು ಘೋಷಿಸಿರುವುದು ಉದ್ಯಮಿ ಆನಂದ್ ಮಹೀಂದ್ರ.
ವಿಶ್ವ ಕಪ್ ಚೆಸ್ನಲ್ಲಿ ರನ್ನರ್ ಅಪ್ ಆಗಿರುವ ಪ್ರಜ್ಞಾನಂದಗೆ ಮಹೀಂದ್ರ ಕಂಪನಿಯ ಥಾರ್ ಕೊಡುಗೆಯಾಗಿ ನೀಡಿ ಎಂದು ಮಹೀಂದ್ರ ಸಂಸ್ಥೆಯ ಚೇರ್ಮನ್ ಆನಂದ್ ಮಹೀಂದ್ರ ಅವರಲ್ಲಿ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಕೇಳಿಕೊಂಡಿದ್ದರು.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಅಂಥ ಕೋರಿಕೆಗಳ ಹಿನ್ನೆಲೆಯಲ್ಲಿ ಆನಂದ್ ಮಹೀಂದ್ರ ತಮ್ಮ ಕಂಪನಿಯ ಎಲೆಕ್ಟ್ರಿಕ್ ವಾಹನ ಕೊಡುಗೆಯಾಗಿ ನೀಡಲಿರುವ ಕುರಿತು ಘೋಷಣೆ ಮಾಡಿದ್ದಾರೆ. ವೀಡಿಯೊ ಗೇಮ್ಸ್ ಹಾವಳಿಯ ಮಧ್ಯೆಯೂ ಮಕ್ಕಳನ್ನು ಬೌದ್ಧಿಕ ಆಟವಾಗಿರುವ ಚೆಸ್ನಲ್ಲಿ ತೊಡಗಿಕೊಳ್ಳುವಂತೆ ಮಾಡಿರುವ ತಂದೆ-ತಾಯಿ ಕುರಿತು ನನಗೆ ಅಪಾರ ಮೆಚ್ಚುಗೆ ಇದೆ ಎಂದಿರುವ ಅವರು, ಇದು ನಮ್ಮ ಎಲೆಕ್ಟ್ರಿಕ್ ವಾಹನಗಳಂತೆ ಉತ್ತಮ ಭವಿಷ್ಯದ ಮೇಲಿನ ಹೂಡಿಕೆ ಎಂದು ಅವರು ಹೇಳಿದ್ದಾರೆ. ಅದೇ ಕಾರಣಕ್ಕೆ ಪ್ರಜ್ಞಾನಂದರ ತಾಯಿ-ತಂದೆಗೆ ಎಕ್ಸ್ಯುವಿ400 ಕೊಡುಗೆಯಾಗಿ ನೀಡುವ ಭರವಸೆ ನೀಡಿದ್ದಾರೆ.
ಚೆಸ್ ವಿಶ್ವ ಕಪ್ ಫೈನಲ್ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸಿದ ಪ್ರಜ್ಞಾನಂದ, ಉತ್ತಮ ಸೆಣಸಾಟ ತೋರಿದರೂ ಕೆಲವೇ ಅಂತರದಲ್ಲಿ ಸೋಲುವ ಮುಖೇನ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.