ಕ್ರೀಡೆ

IND V/s PAK ಕ್ರಿಕೆಟ್​ ಪಂದ್ಯದ ಹಿನ್ನೆಲೆ, ಅಹಮದಾಬಾದ್​ನ ಆಸ್ಪತ್ರೆಗಳಲ್ಲಿ ಶುರುವಾಯ್ತು ಬೆಡ್​​ ಬುಕ್ಕಿಂಗ್​

ಅಹಮದಾಬಾದ್: ಈ ವರ್ಷ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಿರೀಕ್ಷೆ ಗಗನಕ್ಕೇರಿದೆ. ಐಟಿಸಿಯ ವೆಲ್ಕಮ್‌ ಹೋಟೆಲ್ ಅಕ್ಟೋಬರ್ ರಾತ್ರಿಯ ತಂಗಲು ರೂ 72,000 ಕೇಳುತ್ತಿದೆ ಎಂಬ ವರದಿಗಳು ಹೊರಬೀಳುತ್ತಿದ್ದಂತೆಯೇ ಆ ನಗರದಲ್ಲಿ ಒಂದು ರಾತ್ರಿಯ ಹೋಟೆಲ್ ರೂಮ್‌ಗಳ ಬೆಲೆಗಳು ಸಾಮಾನ್ಯ ದರಕ್ಕಿಂತ 20 ಪಟ್ಟು ಹೆಚ್ಚಾಗಿದೆ

ಆಗಸಕ್ಕೇರಿರುವ ಬೆಲೆಗಳು ಮತ್ತು ಕೊಠಡಿಗಳ ಅಲಭ್ಯತೆಯು ಪ್ರಯಾಣಿಸುವ ಅಭಿಮಾನಿಗಳು ಹೊಸ ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿದಿದ್ದಾರೆ! ಅಹಮದಾಬಾದ್‌ ಮಿರರ್‌ನ ವರದಿಯ ಪ್ರಕಾರ, ಜನರು ಫುಲ್​ ಬಾಡಿ ಸ್ಕ್ಯಾನ್​​ಗಾಗಿ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ 15 ರಂದು ರಾತ್ರಿಗೇ ಬುಕ್​ ಮಾಡಿಸುತ್ತಿದ್ದಾರೆ.

ಈ ಹೊಸ ವ್ಯವಸ್ಥೆ ಅವಳಿ ಉದ್ದೇಶಗಳನ್ನು ಪೂರೈಸುತ್ತದೆ. ವಸತಿ ಪಕ್ಕಾ ಆದರೆ, ಅದರೊಂದಿಗೆ ಫುಲ್ ಬಾಡಿ ಚೆಕಪ್​ ಕೂಡ ನಡೆದುಹೋಗುತ್ತದೆ.

"ಇದು ಆಸ್ಪತ್ರೆಯಾಗಿರುವುದರಿಂದ ಅವರು ಪೂರ್ಣ ದೇಹ ತಪಾಸಣೆ ಮತ್ತು ರಾತ್ರಿಯ ತಂಗುವಿಕೆಗಾಗಿ ಕೇಳುತ್ತಿದ್ದಾರೆ. ಹೀಗಾಗಿ ಅವರ ಲಾಡ್ಜ್​ಗಳಿಗೆ ನೀಡುವ ಹಣವನ್ನು ಉಳಿಸುವುದು ಮತ್ತು ಅವರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಎರಡೂ ಉದ್ದೇಶಗಳು ಈಡೇರಿವೆ” ಎಂದು ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಡಾ. ಪರಾಸ್ ಶಾ ಅವರು ಪ್ರಕಟಣೆಗೆ ತಿಳಿಸಿದರು. (ಏಜೆನ್ಸೀಸ್)