ಹೊಸದಿಲ್ಲಿ: ಇಂದು ಏಕದಿನ ವಿಶ್ವಕಪ್ 2023ರ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಪೆವಿಲಿಯನ್ ಸೇರಿದ ಮೊದಲ ಬ್ಯಾಟ್ಸ್‌ಮನ್ ಏಂಜೆಲೊ ಮ್ಯಾಥ್ಯೂಸ್ ಎಂದು ಹೇಳಲಾಗಿದೆ. ಅಷ್ಟಕ್ಕೂ ಏನಿದು ಟೈಮ್ಔಟ್? ವಿಕೆಟ್ ಪತನವಾಗದೆ ಮ್ಯಾಥ್ಯೂಸ್ ಔಟಾಗಿದ್ಯಾಕೆ? ಇಲ್ಲಿದೆ ಮಾಹಿತಿ.
ಇದನ್ನೂ ಓದಿ: ಮುಖ್ಯಮಂತ್ರಿಗೆ ಹಣ ಕೊಟ್ಟಿದ್ದೇನೆ ಎಂದು ಆರೋಪಿಯೇ ಹೇಳಿರುವಾಗ ತನಿಖೆ ಆಗಬೇಕೋ ಬೇಡ್ವೋ?: ಪ್ರಲ್ಹಾದ ಜೋಶಿ
ಅರುಣ್ ಜೆಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ದದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಹಿರಿಯ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಮೈದಾನಕ್ಕಿಳಿದ ವೇಳೆ ಟೈಮ್ಡ್ ಔಟ್ ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ಡ್ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಮ್ಯಾಥ್ಯೂಸ್ ಒಳಗಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಟೈಮ್ ಔಟ್ ಆದ ಬ್ಯಾಟ್ಸ್‌ಮನ್ ಎಂಬ ಪಟ್ಟವನ್ನು ಮ್ಯಾಥ್ಯೂಸ್ ಪಡೆದುಕೊಂಡಿದ್ದು, ಈ ಹಿಂದೆ ಮ್ಯಾಥ್ಯೂಸ್ಗೂ ಮೊದಲು ಯಾವುದೇ ಬ್ಯಾಟ್ಸ್‌ಮನ್ ಈ ರೀತಿ ಔಟಾಗಿರಲಿಲ್ಲ ಎಂದು ಹೇಳಲಾಗಿದೆ. ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಕ್ರೀಸ್ಗೆ ಬಂದಾಗ ಅವರ ಹೆಲ್ಮೆಟ್ ಕಟ್ಟಿದ್ದ ಪಟ್ಟಿ ಹರಿದಿತ್ತು. ಇದನ್ನು ಗಮನಿಸಿದ ಮ್ಯಾಥ್ಯೂಸ್, ಬೇರೆ ಹೆಲ್ಮೆಟ್ ಕೊಡುವಂತೆ ಡಗೌಟ್ಗೆ ಸನ್ನೆ ಮಾಡಿ ತೋರಿಸಿದರು. ಆದರೆ ಅಷ್ಟರ ವೇಳೆಗೆ ಮ್ಯಾಥ್ಯೂಸ್ ಕಣಕ್ಕಿಳಿದು 2 ನಿಮಿಷಕ್ಕೂ ಹೆಚ್ಚು ಸಮಯವಾಗಿತ್ತು. ಇದನ್ನು ಗಮನಿಸಿದ ಬಾಂಗ್ಲಾದೇಶ ನಾಯಕ ಶಕೀಬ್ ಹಲ್ ಹಸನ್, ಅಂಪೈರ್ ಬಳಿ ಮ್ಯಾಥ್ಯೂಸ್ ವಿರುದ್ಧ ಟೈಮ್ ಔಟ್ ಮನವಿ ಮಾಡಿದರು.
ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ನಂತರ ಹೊಸ ಬ್ಯಾಟ್ಸ್‌ಮನ್ ಮುಂದಿನ ಎರಡು ನಿಮಿಷಗಳಲ್ಲಿ ಬಾಲ್ ಎದುರಿಸಲು ರೆಡಿಯಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಂಪೈರ್ ಔಟ್ ಕೊಡುವ ಪರಿಸ್ಥಿತಿ ಎದುರಾಯಿತು. ಬಾಂಗ್ಲಾದೇಶದ ನಾಯಕ ಶಕೀಬ್ ಮ್ಯಾಥ್ಯೂಸ್ ಅವರ ಔಟ್ಗೆ ಮನವಿ ಮಾಡದೆ ಇದ್ದಿದ್ದರೆ ಮ್ಯಾಥ್ಯೂಸ್ ಪೆವಿಲಿಯನ್ನತ್ತ ಮುಖಮಾಡುವ ಸನ್ನಿವೇಶ ಬರುತ್ತಿರಲಿಲ್ಲ.