More

    ಸಂಘ ಸಂಸ್ಥೆಗಳ ಲೆಕ್ಕ ಪತ್ರ ಪರಿಶೋದನೆ; 5ವರ್ಷಗಳಲ್ಲಿ 76,156 ಸಂಘಗಳ ಲೆಕ್ಕ ಬಾಕಿ

    ಬೆಂಗಳೂರು:
    ಸಹಕಾರ ಇಲಾಖೆ ಅಡಿಯಲ್ಲಿ ನೋಂದಣಿಯಾಗಿರುವ ಸಂಘ ಸಂಸ್ಥೆಗಳ ಲೆಕ್ಕ ಪತ್ರ ಪರಿಶೋದನೆಯೇ ಇಲಾಖೆಗೆ ದೊಡ್ಡ ಸವಾಲಾಗಿದೆ.
    ಪ್ರತಿ ವರ್ಷವೂ ಆಗಿಂದಾಗ್ಗೆ ಪ್ರತಿ ಸಂಘ ಸಂಸ್ಥೆಗಳಿಗೂ ಕಾಲ ಕಾಲಕ್ಕೆ ಸರ್ವ ಸದಸ್ಯರ ಸಭೆ ನಡೆಸಿ ಲೆಕ್ಕ ಪತ್ರವನ್ನು ಮಂಡನೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಅನೇಕ ಕಾರಣಕ್ಕಾಗಿ ಈ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿಲ್ಲ. ಇದು ಲೆಕ್ಕ ಪರಿಶೋದನೆಗೂ ಅಡ್ಡಗಾಲಾಗಿದೆ.
    ನೋಂದಣಿ ಮಾಡಿಕೊಂಡಿರುವ 45 ಸಾವಿರ ಸಹಕಾರ ಸಹಕಾರ ಸಂಘಗಳಲ್ಲಿ ಕಳೆದ 5 ವರ್ಷಗಳಲ್ಲಿ 141.78 ಕೋಟಿ ರೂ ದುರುಪಯೋಗವಾಗಿರುವ ವರದಿಗಳಿದ್ದರೂ, ಸಹಕಾರ ಇಲಾಖೆ ಈ ಬಗ್ಗೆ ಇನ್ನೂ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ.
    ಸಹಕಾರ ಸಂಘಗಳಲ್ಲಿ ಬಹುದೊಡ್ಡ ಸಮಸ್ಯೆ ಎಂದರೆ, ಆಡಳಿತ ಮಂಡಳಿ ನಡುವೆ ಹೊಂದಾಣಿಕೆ ಇಲ್ಲದೆ, ಆರೋಪ, ಪ್ರತ್ಯಾರೋಪ ಮಾಡಿಕೊಂಡು ಕಾಲಾಹರಣ ಮಾಡುತ್ತಿರುವ ಪ್ರಕರಣಗಳೇ ಹೆಚ್ಚಾಗಿವೆ. ಈ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣ ತಳಕು ಹಾಕಿಕೊಂಡು, ಮುಖಂಡರಿಂದ ಹಿಡಿದು ಶಾಸಕರ ತನಕ ತಮ್ಮ ಪ್ರಭಾವವನ್ನು ಬಳಸಿ ಎಲ್ಲದಕ್ಕೂ ಅಡ್ಡಲಾಗುತ್ತಿರುವುದು ಇಲಾಖೆಗೆ ನಿಜಕ್ಕೂ ಸವಾಲಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
    ಸಹಕಾರ ಇಲಾಖೆ ಅಡಿಯಲ್ಲಿರುವ ಸಂಘ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಚಿವ ಕೆ.ಎನ್.ರಾಜಣ್ಣ ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ.
    ಸಹಕಾರ ಇಲಾಖೆ ಶಿಸ್ತಿನ ಕ್ರಮ ಜರುಗಿಸುತ್ತದೆ ಎನ್ನುವುದು ಖಚಿತವಾದರೆ, ಎಲ್ಲಾ ಸಂಘಗಳು ಸರಿಯಾದ ದಾರಿಗೆ ಬರುತ್ತವೆ. ಅಧಿಕಾರಿಗಳು ಒತ್ತಡವಿಲ್ಲದೆ, ನಿರ್ಲಿಪ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಮತ.
    ರಾಜ್ಯದಲ್ಲಿ 82,444 ಖಾಸಗಿ ಸನ್ನದು ಲೆಕ್ಕ ಪರಿಶೋಧಕರು ಮತ್ತು 66,159 ಮಂದಿ ಲೆಕ್ಕ ಪರಿಶೋಧಕರು, ಲೆಕ್ಕ ಪರಿಶೋಧನೆ ನಡೆಸಿದರೂ 76,156 ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋದನೆ ಬಾಕಿ ಇದೆ. ಈ ಅಂಶವನ್ನು ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts