GT vs LSG: ನಿನ್ನೆ (ಮೇ.22) ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ 33 ರನ್ಗಳಿಂದ ಎಲ್ಎಸ್ಜಿ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಯಾಪ್ಟನ್ ಶುಭಮನ್ ಗಿಲ್, ಲಖನೌ ಸೂಪರ್ ಜೈಂಟ್ಸ್ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಪಡೆ, 20 ಓವರ್ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 235 ರನ್ ದಾಖಲಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಜಿಟಿ ಪಡೆಗೆ ಆರಂಭಿಕ ಆಘಾತವೇ ಸೋಲಿನ ದಾರಿಯನ್ನು ತೋರಿಸಿತು.
ಆರಂಭಿಕ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಜಾಸ್ ಬಟ್ಲರ್, ಉತ್ತಮ ಆರಂಭ ನೀಡಿದ್ದೇ ಆದರೂ ಪವರ್ಪ್ಲೇ ನಂತರ ಸ್ಫೋಟಕ ಇನ್ನಿಂಗ್ಸ್ ಮುಂದುವರಿಸಲಿಲ್ಲ. ಇದೇ ತಂಡದ ಸೋಲಿಗೆ ದೊಡ್ಡ ಕಾರಣವಾಗಿ ತಿರುಗಿತು. ಪ್ಲೇಆಫ್ ಹೊಸ್ತಿಲಲ್ಲಿರುವ ಗುಜರಾತ್ ಟೈಟನ್ಸ್ಗೆ ಈ ಸೋಲು ಭಾರೀ ನಿರಾಶೆ ಉಂಟುಮಾಡಿತು. ಪಂದ್ಯ ಸೋತ ಬಳಿಕ ಮಾತನಾಡಿದ ಗಿಲ್, ತಮ್ಮ ಸೋಲಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake
"ಇಂದಿನ ಸೋಲು ಕೊಂಚ ಬೇಸರ ಮೂಡಿಸಿದೆ. ಆದರೆ, ನಮ್ಮ ತಂಡ ನೀಡಿದ ಪ್ರದರ್ಶನ ಹಾಗೂ ಪೈಪೋಟಿ ಗಮನಾರ್ಹ. 15ರಿಂದ 20 ರನ್ ಬಿಟ್ಟುಕೊಟ್ಟೆವು. ಅದನ್ನು ತಡೆಯುವಲ್ಲಿ ನಾವು ಮುಂದಿರಬೇಕಿತ್ತು. 210 ರನ್ಗಳಿಗೆ ಎಲ್ಎಸ್ಜಿಯನ್ನು ಕಟ್ಟಿಹಾಕಿದಿದ್ರೆ ಖಂಡಿತ ಫಲಿತಾಂಶ ಬೇರೆಯೇ ಇರುತ್ತಿತ್ತು. ನಮ್ಮ ಬೌಲರ್ಗಳು ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ, ಪವರ್ಪ್ಲೇನಲ್ಲಿ ವಿಕೆಟ್ ಪಡೆಯಲಿಲ್ಲ. 240 ಗಡಿದಾಟುವ ರನ್ಗಳ ಗುರಿಯನ್ನು ಬೆನ್ನತ್ತುವುದು ಅಷ್ಟು ಸುಲಭದ ಮಾತಲ್ಲ. ಪಂದ್ಯ ಸೋತರೂ ನಮ್ಮಲ್ಲಿ ಒಂದಷ್ಟು ಪಾಸಿಟಿವ್ಗಳು ಇವೆ" ಎಂದು ಗಿಲ್ ಹೇಳಿದ್ದಾರೆ,(ಏಜೆನ್ಸೀಸ್).