ಕ್ರೀಡೆ

ಐಪಿಎಲ್​ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೂ ಇದೆ ಅವಕಾಶ..?

ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದಾಗಿ ಇಡೀ ಜಾಗತಿಕ ಕ್ರೀಡಾಲೋಕವೇ ಕಳೆದ 5 ತಿಂಗಳಿಂದ ಸ್ತಬ್ಧಗೊಂಡಿತ್ತು. ಇದೀಗ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಭಾರತದಲ್ಲಿ ಕರೊನಾ ಅಬ್ಬರದ ಜೋರಾಗಿರುವುದರಿಂದ ಯುಎಇಗೆ 13ನೇ ಐಪಿಎಲ್​ ಟೂರ್ನಿ ಸ್ಥಳಾಂತರಿಸಲಾಗಿದೆ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಟೂರ್ನಿ ಸಾಗುತ್ತಿದ್ದಂತೆ, ಪರಿಸ್ಥಿತಿ ಅವಲೋಕಿಸಿ ಶೇಕಡ 30 ಪ್ರೇಕ್ಷಕರಿಗೆ ಸಾಮಾಜಿಕ ಅಂತರದ ನಿಯಮದೊಂದಿಗೆ ಪಂದ್ಯ ನೋಡಲು ಅವಕಾಶ ನೀಡಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಇದರೊಂದಿಗೆ ಅರಬ್​ ರಾಷ್ಟ್ರದಲ್ಲಿರುವ ಕ್ರಿಕೆಟ್​ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್​ನ ಸವಿಯನ್ನು ಸ್ಟೇಡಿಯಂನಲ್ಲಿ ಕುಳಿತು ವೀಕ್ಷಿಸಬಹುದು.

ಕೋವಿಡ್​-19 ತಡೆಗಟ್ಟಲು ಸಾಮಾಜಿಕ ಅಂತರವೇ ಮೂಲ ಮಂತ್ರ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸ್ಟೇಡಿಯಂಗೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಶೀಘ್ರವೇ ಶೇಕಡ 30 ಪ್ರೇಕ್ಷಕರಿಗೆ ಸಾಮಾಜಿಕ ಅಂತರದ ನಿಯಮದೊಂದಿಗೆ ಪಂದ್ಯ ನೋಡಲು ಅವಕಾಶ ನೀಡಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ. ಸೆ.19 ರಿಂದ ನ.10 ರವರೆಗೆ ಯುಎಇಯ ಮೂರು ನಗರಗಳಲ್ಲಿ 60 ಪಂದ್ಯಗಳು ನಡೆಯಲಿವೆ.

ಮುಂಬರುವ ಐಪಿಎಲ್​ ಟೂರ್ನಿಯನ್ನು ದಾಖಲೆ ಮಟ್ಟದಲ್ಲಿ ಟಿವಿ ಮೂಲಕ ಜನರು ವೀಕ್ಷಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ತಿಳಿಸಿದ್ದಾರೆ. ನೇರ ಪ್ರಸಾರ ಹಕ್ಕು ಹೊಂದಿರುವ ವಾಹಿನಿಯೂ ಹೆಚ್ಚು ರೇಟಿಂಗ್​ ನಿರೀಸಿದ್ದು, ಮೈದಾನದಲ್ಲಿ ಪಂದ್ಯ ನೋಡಲು ಆಗಮಿಸುತ್ತಿದ್ದ ಪ್ರೇಕ್ಷಕರು ಕೂಡ ಈ ಬಾರಿ ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಹೀಗಾಗಿ ಹೆಚ್ಚು ರೇಟಿಂಗ್ಸ್​ ಪಾಯಿಂಟ್ಸ್​ ನಿರೀಕ್ಷಿಸಲಾಗುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.