More

    ‘ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ಯೋಗಿ…ನಾನು ಅವರ ಅಭಿಮಾನಿ’

    ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

    ಧೋನಿ ನಿವೃತ್ತಿ ಆದಾಗಿನಿಂದಲೂ ಹಲವು ಹಿರಿಯ ಕ್ರಿಕೆಟ್​ ಆಟಗಾರರು ಅವರನ್ನು ಹೊಗಳಿದ್ದಾರೆ. ಧೋನಿಯ ಆಟ, ವ್ಯಕ್ತಿತ್ವ, ಸ್ವಭಾವಗಳ ಪರಿಚಯ ಮಾಡಿಕೊಟ್ಟಿದ್ದಾರೆ.

    ಹಾಗೇ ಭಾರತದ ಪ್ರಮುಖ ವೇಗದ ಬೌಲರ್​​​ ಆಗಿದ್ದ, 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿರುವ ಜಾವಗಲ್​ ಶ್ರೀನಾಥ್​ ಅವರು ಧೋನಿಯವರನ್ನು ಕ್ರಿಕೆಟ್​​ನ ಯೋಗಿ ಎಂದು ಕರೆದಿದ್ದಾರೆ.

    ಕ್ರಿಕೆಟ್​ ಬಗ್ಗೆ ಸಾಟಿಯಿಲ್ಲದಷ್ಟು ತಿಳಿವಳಿಕೆ ಹೊಂದಿದ್ದಾರೆ. ಅದೆಷ್ಟೇ ಒತ್ತಡದಲ್ಲಿರಲಿ, ಫಲಿತಾಂಶ ಏನೇ ಬರಲಿ ಅದನ್ನು ನಿಭಾಯಿಸುವ ರೀತಿ ಅದ್ಭುತ ಎಂದು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ. ಎಂ.ಎಸ್.ಧೋನಿ ಕ್ರಿಕೆಟ್​​ನ್ನು ಆಳವಾಗಿ ಅರ್ಥೈಸಿಕೊಂಡಿದ್ದಾರೆ. ಸೋಲಿರಲಿ..ಗೆಲುವಿರಲಿ..ಅದಕ್ಕೆ ತುಂಬ ಅಂಟಿಕೊಳ್ಳುವುದಿಲ್ಲ. ಪ್ರತಿ ಗೆಲುವಿನ ನಂತರವೂ ಅವರು ಮಾತನಾಡುವ, ನಡೆದುಕೊಳ್ಳುವ ರೀತಿಯನ್ನು ಗಮನಿಸಿ. ವಿಜಯದ ಕಪ್​​ಗಳನ್ನು ಎತ್ತಿ ಹಿಡಿಯುತ್ತಾರೆ ನಂತರ ಅದನ್ನು ಬೇರೊಬ್ಬರಿಗೆ ಹಸ್ತಾಂತರಿಸಿ ಸುಮ್ಮನೆ ಹೊರಟುಬಿಡುತ್ತಾರೆ. ಎಲ್ಲ ಸಲವೂ ಸಮಚಿತ್ತದಿಂದಲೇ ಇರುತ್ತಾರೆ ಎಂದು ಜಾವಗಲ್​ ಶ್ರೀನಾಥ್​ ಹೊಗಳಿದ್ದಾರೆ. ಇದನ್ನೂ ಓದಿ: Photos: ಬರ್ತ್​ಡೇ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಅವಳಿ ಸಹೋದರಿಯರು…

    ಮೈದಾನದಲ್ಲೂ ಅಷ್ಟೇ ಅವರ ಅಭಿವ್ಯಕ್ತಿ ಶೈಲಿ ನೋಡಿ. ಪಿಚ್​​ನಲ್ಲಿ ಏನೂ ಸರಿ ಇಲ್ಲ…ತಂಡದವರೆಲ್ಲ ಹೋರಾಡುತ್ತಿರುತ್ತಾರೆ. ಆಗಲೂ ಕೂಡ ಏನೂ ಆಗಿಲ್ಲ ಎಂಬಂತೆ ಇರುತ್ತಾರೆ. ತನ್ನ ಮೇಲೆ ತಾವು ಹಿಡಿತ ಸಾಧಿಸುತ್ತಾರೆ. ಅದು ಯೋಗಿಗಳಿಗೆ ಮಾತ್ರ ಸಾಧ್ಯ. ನನಗಂತೂ ಧೋನಿ ಮೇಲೆ ಅಪಾರ ಗೌರವ ಇದೆ ಎಂದಿದ್ದಾರೆ.

    ನಾನು ಮೊದಲು ಧೋನಿಯವರನ್ನು ಭೇಟಿಯಾಗಿದ್ದು 2003ರಲ್ಲಿ. ಅವರ ಆತ್ಮವಿಶ್ವಾಸಕ್ಕೆ ನಾನು ಸೋತು ಹೋಗಿದ್ದೇನೆ. ಭಾರತ-ಪಾಕಿಸ್ತಾನ ಮತ್ತು ಕೀನ್ಯಾ ನಡುವೆ ತ್ರಿಕೋನ ಸರಣಿ ನಡೆಯುತ್ತಿತ್ತು. ಆಗ ಅವರ ಆಟ, ಆತ್ಮವಿಶ್ವಾಸ ಮತ್ತು ತಂಡದೊಳಗೆ ಎದುರಾಗುವ ಸಂದರ್ಭಗಳನ್ನು ನಿಭಾಯಿಸುವ ರೀತಿ ನೋಡಿ ತುಂಬ ಖುಷಿಯಾಯಿತು. ಆಗಲೇ ನಾನವರ ಅಭಿಮಾನಿಯಾಗಿಬಿಟ್ಟೆ. ಅದನ್ನು ಧೋನಿಗೂ ಹೇಳಿದ್ದೇನೆ. ಅವರೊಬ್ಬ ಕ್ರಿಕೆಟ್​ ಯೋಗಿ ಎಂಬುದರಲ್ಲಿ ಸಂಶಯವೇ ಇಲ್ಲ ಎಂದು ಶ್ರೀನಾಥ್​ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಪೂರ್ವ ಲಡಾಖ್​​​ನಲ್ಲಿ ಮತ್ತೆ ಉದ್ವಿಘ್ನ ಪರಿಸ್ಥಿತಿ; ಯುದ್ಧ ಟ್ಯಾಂಕ್​​ಗಳೊಂದಿಗೆ ಸಜ್ಜಾದ ಭಾರತ-ಚೀನಾ ಸೈನಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts