More

    ಪೂರ್ವ ಲಡಾಖ್​​​ನಲ್ಲಿ ಮತ್ತೆ ಉದ್ವಿಘ್ನ ಪರಿಸ್ಥಿತಿ; ಯುದ್ಧ ಟ್ಯಾಂಕ್​​ಗಳೊಂದಿಗೆ ಸಜ್ಜಾದ ಭಾರತ-ಚೀನಾ ಸೈನಿಕರು

    ನವದೆಹಲಿ: ಪೂರ್ವ ಲಡಾಖ್​​​ನ ಪ್ಯಾಂಗೋಂಗ್​ ಸರೋವರದ ದಕ್ಷಿಣ ತೀರದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಭಾರತ-ಚೀನಾ ನಡುವೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

    ಇಂದು ಭಾರತ ಮತ್ತು ಚೀನಾ ನಡುವೆ ಕಮಾಂಡರ್​ ಮಟ್ಟದ ಮಾತುಕತೆ ನಡೆಯುತ್ತಿದೆ. ಆದರೆ ಇತ್ತ ಗಡಿಯಲ್ಲಿ ಎರಡೂ ದೇಶಗಳ ಸೈನಿಕರು, ಸುಸಜ್ಜಿತ ಅಸ್ತ್ರಗಳು, ಯುದ್ಧದ ಟ್ಯಾಂಕ್​​ಗಳೊಂದಿಗೆ ಪರಸ್ಪರ ಗುಂಡಿನ ದಾಳಿ ನಡೆಸುವಷ್ಟು ಅಂತರದಲ್ಲಿ ಬೀಡುಬಿಟ್ಟಿವೆ.
    ಚೀನಾದ ಯುದ್ಧದ ಟ್ಯಾಂಕ್​​ಗಳು, ಶಸ್ತ್ರಾಸ್ತ್ರಗಳನ್ನೊಳಂಡ ವಾಹನಗಳು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಕಾಲಾ ಟಾಪ್​ ತಪ್ಪಲು ಪ್ರದೇಶದ ಬಳಿ ಬಂದು ನಿಂತಿವೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಸಜ್ಜುಗೊಂಡಿದೆ. ಸೈನಿಕರು ಕಾಲಾ ಟಾಪ್​ ಬಳಿ ಫಿರಂಗಿ, ಯುದ್ಧದ ಟ್ಯಾಂಕ್​ ಮತ್ತು ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧ ಮಾಡಿಕೊಂಡು ನಿಂತಿದ್ದಾರೆ.

    ಗಡಿಯಲ್ಲಿ ಮತ್ತೆ ಹೊಸದಾಗಿ ಉದ್ವಿಗ್ನತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಭಾರತೀಯ ಯುದ್ಧ ಟ್ಯಾಂಕ್​​ಗಳನ್ನು ಸ್ಪ್ಯಾಂಗೂರ್​ ತ್ಸೋ ಮತ್ತು ಚುಶುಲ್​ ನಡುವಿನ ಸೂಕ್ಷ್ಮ ಪ್ರದೇಶವಾದ ನೈಋತ್ಯ ಬಯಲು ಪ್ರದೇಶಗಳಲ್ಲಿ ಭಾರತೀಯ ಯುದ್ಧ ಟ್ಯಾಂಕ್​ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸುದೀಪ್​ ಮತ್ತು ಇಂದ್ರಜಿತ್​ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?

    ಭಾರತ-ಚೀನಾ ನಡುವೆ ಈಗಾಗಲೇ ಮಾತುಕತೆ ನಡೆದಿದೆ. ಆದರೂ ಚೀನಾ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. ಆಗಸ್ಟ್​ 29-30 ರ ಮಧ್ಯರಾತ್ರಿ ಚೀನಾ ಸೈನಿಕರು ಪ್ಯಾಂಗೋಂಗ್​ ಸರೋವರದ ದಕ್ಷಿಣ ತೀರದ ಬಳಿ ಏಕಪಕ್ಷೀಯವಾಗಿ ವಾಸ್ತವ ಸ್ಥಿತಿ ಬದಲಿಸಲು ಪ್ರಚೋದನಕಾರಿ ಪ್ರಯತ್ನಗಳನ್ನು ಮಾಡಿದ್ದರು. ಅವರನ್ನು ಭಾರತೀಯ ಸೇನೆ ಸಮರ್ಥವಾಗಿ ಹಿಮ್ಮೆಟ್ಟಿಸಿದೆ ಎಂದು ನಿನ್ನೆ ರಕ್ಷಣಾ ಸಚಿವಾಲಯ ಹೇಳಿತ್ತು. ಚೀನಾದ ಉಪಟಳ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಎರಡೂ ದೇಶಗಳ ನಡುವೆ ಕಮಾಂಡರ್​ ಮಟ್ಟದ ಮಾತುಕತೆ ನಡೆಯುತ್ತಿದೆ. (ಏಜೆನ್ಸೀಸ್)

    ‘ಅಂದು ಏನು ನಡೆಯಿತೋ..ಅದು ಭಯಾನಕತೆಯನ್ನೂ ಮೀರಿದ್ದು…’ ಸುರೇಶ್​ ರೈನಾ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts