More

    ಐಪಿಎಲ್ ಆಡಲು ದುಬೈಗೆ ಬಂದಿಳಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು…

    ದುಬೈ: ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ಫಾಫ್ ಡು ಪ್ಲೆಸಿಸ್​, ಲುಂಗಿ ಎನ್​ಗಿಡಿ ಹಾಗೂ ಕಗಿಸೊ ರಬಾಡ ಮಂಗಳವಾರ ಬೆಳಗಿನ ಜಾವ ದುಬೈಗೆ ಬಂದಿಳಿದರು. ಸೆ.19 ರಿಂದ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್​ನ ವಿವಿಧ ತಂಡಗಳ ಪರ ಮೂವರು ಕಣಕ್ಕಿಳಿಯಲಿದ್ದಾರೆ. ಕರೊನಾ ವೈರಸ್​ ಭೀತಿಯಿಂದ ಭಾರತದಿಂದ ಅರಬ್​ ರಾಷ್ಟ್ರಕ್ಕೆ ಐಪಿಎಲ್​ ಸ್ಥಳಾಂತರಗೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕನಾಗಿರುವ ಪ್ಲೆಸಿಸ್​ ಹಾಗೂ ವೇಗಿ ಎನ್​ಗಿಡಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೇರ್ಪಡೆಗೊಂಡರೆ, ರಬಾಡ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೂಡಿಕೊಂಡರು.

    ಇದನ್ನೂ ಓದಿ: ‘ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ಯೋಗಿ…ನಾನು ಅವರ ಅಭಿಮಾನಿ’

    ಸಿಎಸ್​ಕೆ ಹಾಗು ಡೆಲ್ಲಿ ತಂಡಗಳ ಅಧಿಕೃತ ಟ್ವಿಟರ್​ ಪುಟದಲ್ಲಿ ಆಟಗಾರರು ದುಬೈಗೆ ಬಂದಿರುವ ಫೋಟೋಗಳನ್ನು ಪ್ರಕಟಿಸಲಾಗಿದೆ. ಮೂವರು ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದ್ದಾರೆ. ಬಳಿಕ ಕರೊನಾ ಪರೀಕ್ಷೆ ಮುಕ್ತಾಯದ ಬಳಿಕ ಬಯೊ ಬಬಲ್​ಗೆ ಪ್ರವೇಶ ಪಡೆದು ತರಬೇತಿ ಆರಂಭಿಸಲಿದ್ದಾರೆ. ಭಾರತದ ಎಲ್ಲ ಆಟಗಾರರು 6 ದಿನಗಳ ಕ್ವಾರಂಟೈನ್​ ಮುಗಿಸಿ ಅಭ್ಯಾಸ ಆರಂಭಿಸಿದ್ದಾರೆ. ಆದರೆ, ಸಿಎಸ್​ಕೆ ತಂಡದಲ್ಲಿ 2 ಆಟಗಾರರು ಸೇರಿದಂತೆ 13 ಮಂದಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದು, ಸದ್ಯ ಐಸೋಲೇಷನ್​ನಲ್ಲಿದ್ದಾರೆ. ಇದೀಗ ಮೊದಲ ವರದಿಯಲ್ಲಿ ನೆಗೆಟಿವ್​ ಬಂದಿದ್ದು, ಎರಡನೇ ವರದಿಯಲ್ಲೂ ನೆಗೆಟಿವ್​ ಬಂದರೂ ಬಯೊ ಬಬಲ್​ ವ್ಯಾಪ್ತಿಗೆ ಬರಲಿದ್ದಾರೆ.

    ಇದನ್ನೂ ಓದಿ: ‘ಅಂದು ಏನು ನಡೆಯಿತೋ..ಅದು ಭಯಾನಕತೆಯನ್ನೂ ಮೀರಿದ್ದು…’ ಸುರೇಶ್​ ರೈನಾ ಟ್ವೀಟ್​

    ಸೆ.19 ರಿಂದ ನ.10 ರವರೆಗೆ 13ನೇ ಆವೃತ್ತಿಯ ಐಪಿಎಲ್​ ಟೂರ್ನಿ ನಡೆಯಲಿದೆ. ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿವೆ. ಇಂಗ್ಲೆಂಡ್​ ಪ್ರವಾಸದಲ್ಲಿರುವ ಕೆಲ ಆಸ್ಟ್ರೆಲಿಯಾ ಆಟಗಾರರು ಸರಣಿ ಮುಕ್ತಾಯಗೊಂಡ ಬಳಿಕ ಯುಇಎಗೆ ಬರಲಿದ್ದಾರೆ.

    VIDEO: ಆಟಗಾರರು ಸಮಯ ಕಳೆಯಲು ವಿಶೇಷ ಕೊಠಡಿ ನಿರ್ಮಿಸಿದ ಮುಂಬೈ ಇಂಡಿಯನ್ಸ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts