ಕ್ರೀಡೆ

ಪಾಕಿಸ್ತಾನ ವಿರುದ್ಧ ಆಲ್​ರೌಂಡ್​ ಪ್ರದರ್ಶನ; ಆಸ್ಟ್ರೇಲಿಯಾಗೆ 62ರನ್​ಗಳ ಜಯ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ  ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಲ್​ರೌಂಡ್ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾ ತಂಡವು 62 ರನ್​ಗಳ ಜಯ ಗಳಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರಂಭಿಕರಾದ ಡೇವಿಡ್ ವಾರ್ನರ್ (163 ರನ್, 124 ಎಸೆತ, 14 ಬೌಂಡರಿ, 9 ಸಿಕ್ಸರ್), ಮಿಚೆಲ್ ಮಾರ್ಷ್​ (121 ರನ್, 108 ಎಸೆತ, 10 ಬೌಂಡರಿ, 9 ಸಿಕ್ಸರ್) ಶತಕಗಳ ಫಲವಾಗಿ ಆಸ್ಟ್ರೇಲಿಯಾ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿತ್ತು.

ಪಾಕಿಸ್ತಾನದ ಪರ ಶಹೀನ್​ ಅಫ್ರಿದಿ (10-1-54-5), ಹ್ಯಾರಿಸ್​ ರೌಫ್ (8-0-83-3), ಉಸಾಮಾ ಮಿರ್ (9-0-82-1), ಹಸನ್ ಅಲಿ (8-0-57-0), ಇಫ್ತಿಕಾರ್ ಅಹಮದ್ (8-0-37-0), ಮೊಹಮ್ಮದ್ ನವಾಜ್ (7-0-43-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಸವಾಲಿನ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಅಬ್ದುಲ್ಲಾ ಶಫಿಕ್ (64 ರನ್, 61 ಎಸೆತ, 7 ಬೌಂಡರಿ, 2 ಸಿಕ್ಸರ್), ಇಮಾಮ್​ ಉಲ್ ಹಕ್ (70 ರನ್, 71 ಎಸೆತ, 10 ಬೌಂಡರಿ) ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 45.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲೌಟ್​ ಆಗುವ ಮೂಲಕ 62 ರನ್​ಗಳ ಸೋಲೊಪ್ಪಿಕೊಂಡಿತ್ತು.

ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ (10-0-53-4), ಪ್ಯಾಟ್ ಕಮ್ಮಿನ್ಸ್​ (7.3-0-62-2), ಮಾರ್ಕಸ್​ ಸ್ಟೋಯಿನಿಸ್ (5-0-40-2), ಜೋಶ್​ ಹೇಜಲ್​ವುಡ್ (10-1-37-1), ಮಿಚೆಲ್ ಸ್ಟಾರ್ಕ್​ (8-0-65-1), ಗ್ಲೆನ್​ ಮ್ಯಾಕ್ಸ್​ವೆಲ್ (5-0-40-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.