Ajit Agarkar: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರರಾಗಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ಗೆ ಇದೀಗ ಬಂಪರ್ ಆಫರ್ ಒಲಿದುಬಂದಿದೆ. ಈ ವರ್ಷದಿಂದ ಮುಂದಿನ ವರ್ಷ (2026) ಜೂನ್ವರೆಗೆ ಮುಖ್ಯ ಆಯ್ಕೆಗಾರರಾಗಿ ಅವರು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಇದನ್ನೂ ಓದಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ರಷ್ಯಾ ಭೇಟಿ; ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ! | S Jaishankar
ಕೆಲವು ದಿನಗಳ ಹಿಂದೆಯಷ್ಟೇ ಅವರ ಹುದ್ದೆ ಕುರಿತಂತೆ ಸಾಕಷ್ಟು ಚರ್ಚೆಗಳು ಭುಗಿಲೆದ್ದಿತ್ತು. ಮುಖ್ಯ ಆಯ್ಕೆಗಾರರಾಗಿ ಅವರೇ ಮುಂದುವರಿಯಲಿದ್ದಾರಾ? ಎಂಬ ಪ್ರಶ್ನೆಗಳು ಬಿಸಿಸಿಐ ಅಂಗಳದಲ್ಲಿತ್ತು. ಇದಕ್ಕೆ ಕಡೆಗೂ ಸ್ಪಷ್ಟನೆ ನೀಡಿರುವ ಬಿಸಿಸಿಐ, ಅವರ ಅವಧಿಯನ್ನು ಒಂದು ವರ್ಷಕ್ಕೆ ಮುಂದೂಡುವ ಮೂಲಕ ಅಗರ್ಕರ್ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದೆ. ಐಪಿಎಲ್ 2025ರ ಆವೃತ್ತಿಗೂ ಮೊದಲು ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಈಗ ಅದು ಮುಂದಿನ ವರ್ಷಕ್ಕೂ ಮುಂದುವರಿಕೆ ಆಗಲಿದೆ.
ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕಗೊಂಡಾಗಿನಿಂದ, ಇಲ್ಲಿಯವರೆಗೆ ಭಾರತ ಎರಡು ಐಸಿಸಿ ಟ್ರೋಫಿಯನ್ನು ಗೆದ್ದಿದೆ. 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಓಟ ಮುಂದುವರೆಸಿದ ಗೂಳಿ: ನಿಫ್ಟಿ 33, ಸೆನ್ಸೆಕ್ಸ್ 143 ಪಾಯಿಂಟ್ಸ್ ಏರಿಕೆ | Stock Market
ಅಗರ್ಕರ್ ಅವರ ಅವಧಿಯಲ್ಲಿ, ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ವಿದಾಯ ಹೇಳಿದರು. ಇನ್ನು ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ವಿರಾಮ ತೆಗೆದುಕೊಂಡರೆ, ರವೀಂದ್ರ ಜಡೇಜಾ ಟಿ20 ಸ್ವರೂಪಕ್ಕೆ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡ ನಿರ್ಧಾರಗಳಿಂದ ಭಾರತೀಯ ತಂಡವು ಉತ್ತಮ ಲಯಕ್ಕೆ ಮರಳಿದೆ.