

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಗೆಲುವಿನ ಓಟವನ್ನು ವಾರದ ವಹಿವಾಟಿನ ನಾಲ್ಕನೇ ದಿನವಾದ ಗುರುವಾರ ಕೂಡ ಮುಂದುವರಿಸಿವೆ.
ನಿಫ್ಟಿ50 ಸೂಚ್ಯಂಕವು 33 ಪಾಯಿಂಟ್ಗಳೊಂದಿಗೆ 0.13% ಹೆಚ್ಚಳದೊಂದಿಗೆ 25,084 ಪಾಯಿಂಟ್ಗಳಲ್ಲಿ ಮುಕ್ತಾಯಗೊಂಡರೆ, ಬಿಎಸ್ಇ ಸೆನ್ಸೆಕ್ಸ್ 143 ಪಾಯಿಂಟ್ಗಳೊಂದಿಗೆ 0.17% ಏರಿಕೆಯಾಗಿ 82,001 ಪಾಯಿಂಟ್ಗಳಲ್ಲಿ ಮುಕ್ತಾಯಗೊಂಡಿದೆ. ಸೂಚ್ಯಂಕಗಳು 25,000 ಮತ್ತು 82,000 ರ ಗಮನಾರ್ಹ ಮಾನಸಿಕ ಮಿತಿಗಳಿಗಿಂತ ಮೇಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
149 ಷೇರುಗಳು 52 ವಾರಗಳ ಗರಿಷ್ಟಮಟ್ಟ ತಲುಪಿವೆ. ಆದಾಗ್ಯೂ, 49 ಷೇರುಗಳು 52 ವಾರಗಳ ಕನಿಷ್ಟ ಮಟ್ಟವನ್ನು ತಲುಪಿವೆ.
ಮಿಡ್ಕ್ಯಾಪ್ ಐಟಿ ಕಂಪನಿಯಾದ ಹೆಕ್ಸಾವೇರ್ ಟೆಕ್ನಾಲಜೀಸ್ ಲಿಮಿಟೆಡ್ ಷೇರುಗಳು ಗುರುವಾರ ಸತತ ನಾಲ್ಕನೇ ಅವಧಿಗೆ ಗೆಲುವಿನ ಓಟವನ್ನು ಮುಂದುವರಿಸಿದವು. ಷೇರುಗಳು ಶೇ. 4.47 ರಷ್ಟು ಏರಿಕೆಯಾಗಿ ರೂ. 808.75 ಕ್ಕೆ ಮುಕ್ತಾಯಗೊಂಡಿವೆ. ಆದರೆ, ಕಳೆದ ಎರಡು ದಿನಗಳಿಂದ ಸತತ ಏರಿಕೆಯಲ್ಲಿದ್ದ ಒಲಾ ಎಲೆಕ್ಟ್ರಿಕ್ ಇಂದು(ಗುರುವಾರ) ಇಳಿಕೆಯಾಗಿದೆ. ದಿನದ ವಹಿವಾಟಿನಲ್ಲಿ ಶೇ.8.27 ಕುಸಿದು 48.81 ರೂ.ಗಳಲ್ಲಿ ವಹಿವಾಟು ನಡೆಸಿದೆ.(ಏಜೆನ್ಸೀಸ್)