ಸಾಂದರ್ಭಿಕ ಚಿತ್ರ 
ನ್ಯೂಸ್

VIDEO | ಹೆಂಡತಿಯೊಂದಿಗೆ ಕಲಹ, ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ

ಹೈದರಾಬಾದ್: ಪತ್ನಿಯೊಂದಿಗೆ ಜಗಳವಾಡಿ ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್​ ಬಳಿಯ ಆದಿಲಾಬಾದ್​​ನಲ್ಲಿ ನಡೆದಿದೆ.

ಸ್ಥಳೀಯ ಕೆಆರ್‌ಕೆ ಕಾಲೋನಿಯ ಟ್ರ್ಯಾಕ್ಟರ್ ಚಾಲಕ ಬಾಲು ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿರುವ ಯುವಕನಾಗಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯುವಕನು ತನ್ನ ಪತ್ನಿಯೊಂದಿಗೆ ಜಗಳವಾಡಿದ್ದು, ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬ ಹತ್ತಿದ್ದಾನೆ. ಈ ವೇಳೆ ಎಚ್ಚೆತ್ತ ಸ್ಥಳೀಯರು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ ಆತ ವಿದ್ಯುತ್ ತಂತಿಯ ಹಿಡಿದಿದ್ದು, ಆಯತಪ್ಪಿ ನೆಲಕ್ಕೆ ಬಿದ್ದಿದ್ದಾನೆ.

ಕೂಡಲೇ ಸ್ಥಳೀಯರು ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಐಸಿಯುನಲ್ಲಿ ಆತನನ್ನು ಇರಿಸಲಾಗಿದೆ.(ಏಜೆನ್ಸೀಸ್​)