More

    ಯುವಕ ಯುವತಿಯರಿಗೆ ಕಡಿವಾಣ ಹಾಕಲು ಮುಂದಾದ ಸಮುದಾಯ: ಇಲ್ಲಿ ಅಂತರ್ಜಾತಿ ಮದುವೆಯಾದರೆ 1 ಲಕ್ಷ ರೂ. ದಂಡ…

    ನಾರಾಯಣಪುರ: ಬುಡಕಟ್ಟು ಜನಾಂಗದವರನ್ನು ಹೊರತುಪಡಿಸಿ ಯಾವುದೇ ಜಾತಿಯೊಂದಿಗೆ ವಿವಾಹವಾದರೆ ವಧುವಿನ ಕುಟುಂಬಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲು ಬುಡಕಟ್ಟು ಸಮಾಜವು ನಿರ್ಧರಿಸಿ ಆದೇಶ ಹೊರಡಿಸಿರುವ ವಿಚಿತ್ರ ಘಟನೆ ಛತ್ತಿಸ್​ಗಢದ ನಾರಾಯಣಪುರದಲ್ಲಿ ನಡೆದಿದೆ.

    ಇದನ್ನೂ ಓದಿ: ಮಲಗಿದ್ದ ಮಗುವಿನ ಬಾಯಿಯೊಳಗೆ ಹೋದ ಹಲ್ಲಿ: ಹೋಗಿದ್ದು ಎರಡು ಪ್ರಾಣ, ಏನಿದು ವಿಚಿತ್ರ ಘಟನೆ..

    ಸರ್ವ ಆದಿವಾಸಿ ಸಮಾಜ ಎಂಬ ಬುಡಕಟ್ಟು ಸಮುದಾಯಗಳ ಸಂಸ್ಥೆ ಈ ಮಾರ್ಗಸೂಚಿಯನ್ನು ಹೊರಡಿಸಿದ್ದು, ಒಂದು ವೇಳೆ ಈ ದಂಡವನ್ನು ಪಾವತಿಸಲು ಕುಟುಂಬವು ನಿರಾಕರಿಸಿದರೆ, ಇಡೀ ಕುಟುಂಬವನ್ನು ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
    ಈ ಕುರಿತು ಮಾತನಾಡಿದರುವ ಸಂಸ್ಥೆಯ ಉಪಾಧ್ಯಕ್ಷೆ, ಬುಡಕಟ್ಟು ಯುವಕರು ಹೆಚ್ಚು ದಾರಿ ತಪ್ಪುತ್ತಿದ್ದು. ಅವರು ಇತರ ಜಾತಿಯವರನ್ನು ಮದುವೆಯಾದ ನಂತರ ತಮ್ಮ ಸಂಸ್ಕೃತಿ ಮತ್ತು ವಂಶಸ್ಥರ ಪದ್ದತಿಯ ತೊರೆಯುತ್ತಿದ್ದಾರೆ. ದಂಡದ ನಿರ್ಧಾರವು ಈ ಹಾನಿಯನ್ನು ತಡೆಯಬಹುದಾದ ನಿಯಂತ್ರಣ ಕ್ರಮ ಎಂದು ತಿಳಿಸಿದ್ದಾರೆ.

    ಅಲ್ಲದೇ, ಬುಡಕಟ್ಟು ಹೆಣ್ಣುಮಕ್ಕಳು ಬೇರೆ ಜಾತಿ ಅಥವಾ ಧರ್ಮದಲ್ಲಿ ತಮ್ಮ ಮದುವೆಗಳನ್ನು ಮಾಡಿಕೊಳ್ಳುವ ಗೊಂದಲದ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ಇಡೀ ಆದಿವಾಸಿ ಸಮಾಜವು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಮದುವೆಯ ನಂತರ ಓಡಿಹೋಗುವವರಿಗೆ ದಂಡ ವಿಧಿಸಲು ಸಮುದಾಯದ ಹಿರಿಯ ಮುಖಂಡರು ಕಠಿಣ ಕ್ರಮಕ್ಕೆ ನಿರ್ಧರಿಸಿದ್ದಾರೆ. ಇಂತಹ ವಿವಾಹಗಳು ಬುಡಕಟ್ಟುವಿನ ನಡುವೆ ಮತ್ತು ಬುಡಕಟ್ಟು ಜನಾಂಗದವರ ನಡುವೆ ಉದ್ವಿಗ್ನತೆಗೆ ಕಾರಣವಾಗುತ್ತವೆ ಎಂದು ಬುಡಕಟ್ಟು ಸಂಘಟನೆಯ ಸಂಚಾಲಕ ಹೇಳಿದ್ದಾರೆ.

    ಇದನ್ನೂ ಓದಿ: 33 ವರ್ಷಗಳಿಂದ ಪರಾರಿಯಾಗಿದ್ದ ಕಳ್ಳ ಸಿಕ್ಕಿದ್ದೇ ರೋಚಕ..

    ಆದಿವಾಸಿಗಳಲ್ಲದವರನ್ನು ತಮ್ಮ ಪಾಲುದಾರರನ್ನಾಗಿ ಆಯ್ಕೆ ಮಾಡಲು ವಿದ್ಯಾವಂತ ಯುವಕರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಜನಾಂಗದಲ್ಲಿ ಆತಂಕವು ನೆಲೆಸಿದೆ. ಅಂತರ್ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ, ಬುಡಕಟ್ಟು ನಾಯಕರು ತಮ್ಮ ಸಮುದಾಯ ಸಭೆಗಳಲ್ಲಿ ತಮ್ಮ ಸಮಾಜವನ್ನು ಸಂಘಟಿತವಾಗಿ ಇರಿಸಿಕೊಳ್ಳಲು ಮತ್ತು ವಿವಿಧ ಜಾತಿಗಳು ಅಥವಾ ಧರ್ಮಗಳೊಂದಿಗೆ ವಿವಾಹಗಳನ್ನು ನಡೆಸದಂತೆ ಒತ್ತಾಯಿಸಿದ್ದಾರೆ.

    ಅಲ್ಲದೇ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ದಿನೇಶ್ ಮಿಶ್ರಾ ಇಂತಹ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ಅಂತರ್ಜಾತಿ ವಿವಾಹಕ್ಕೆ ಹೋಗಲು ಕಾನೂನುಬದ್ಧ ಹಕ್ಕಿದೆ ಮತ್ತು ಯಾರೂ ಮದುವೆಯಾಗುವ ಆಧಾರದ ಮೇಲೆ ಯಾರನ್ನೂ ನಿಷೇಧಿಸಬಾರದು ಅಥವಾ ಬಹಿಷ್ಕರಿಸಬಾರದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts