More

    33 ವರ್ಷಗಳಿಂದ ಪರಾರಿಯಾಗಿದ್ದ ಕಳ್ಳ ಸಿಕ್ಕಿದ್ದೇ ರೋಚಕ..

    ಪಾಟ್ನಾ: ಸತತ 33 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಕಳ್ಳನನ್ನು ಕೊನೆಗೂ ಬಂಧಿಸಿರುವ ಘಟನೆ ಬಿಹಾರದ ಪಾಟ್ನಾ ಬಳಿ ನಡೆದಿದೆ.

    ಇದನ್ನೂ ಓದಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ವಿಶ್ವದ ಪ್ರತಿಷ್ಠಿತ ಕಂಪನಿಯ ಕಾರು: ಜನನಿಬಿಡ ರಸ್ತೆಯಲ್ಲಿ ನಡೆದ ಘಟನೆ 
     
    ಬಕ್ಸರ್ ಜಿಲ್ಲೆಯ ಉಡಿಯಂಗಂಜ್ ನಿವಾಸಿಯಾದ ಝಂಜತುವಾ (55) ಅವರು 1990 ರ ದಶಕದ ಆರಂಭದಲ್ಲಿ ಮನೆಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳಲ್ಲಿ ಸರಣಿ ಕಳ್ಳತನ ಮತ್ತು ದರೋಡೆಗಳಲ್ಲಿ ಭಾಗಿಯಾಗಿರುವ ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 12 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು, ಸ್ಥಳೀಯರಷ್ಟೇ ಅಲ್ಲ ಪೊಲೀಸರ ನಿದ್ದೆಯನ್ನು ಕೆಡಿಸಿದ್ದ ಕಳ್ಳನ ವಿರುದ್ಧ ಜಿಲ್ಲಾ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾಗಿತ್ತು.

    ಕುಖ್ಯಾತ ಕಳ್ಳ ಝಂಝಾತುವಾ, ಪೊಲೀಸರು ಆತನನ್ನು ಬಂಧಿಸಲು ಮನೆ ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿದಾಗ ಪ್ರತಿ ಬಾರಿ ಪೊಲೀಸರನ್ನು ಯಾಮಾರಿಸಿ ತಪ್ಪಿಸಿಕೊಳ್ಳುತ್ತಿದ್ದನು. ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಆರೋಪಿಯನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ ಆರೋಪಿಯು ತನ್ನ ಮನೆಯನ್ನು ತೊರೆದು ಬಿಹಾರದ ಇತರ ಸ್ಥಳಗಳಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದನು. ಅಲ್ಲದೇ ಸುಮಾರು ಒಂದು ದಶಕದ ಕಾಲ ಕುಟುಂಬ ಹಾಗೂ ಅವರ ಸಂಪರ್ಕದಿಂದಲೂ ಆತ ದೂರವಿದ್ದಿದ್ದರಿಂದ ಆತನ ನಿಖರವಾದ ಸ್ಥಳದ ಬಗ್ಗೆ ಯಾರಿಗೂ ಮಾಹಿತಿ ಸಿಕ್ಕಿರಲಿಲ್ಲ.

    ಇದನ್ನೂ ಓದಿ: ಸಿಂಗಾಪುರದಿಂದ ಕೆಐಎಗೆ ಬಂದಿಳಿದ ಪ್ರಯಾಣಿಕರ ಬೆಲ್ಟ್‌ನಲ್ಲಿ 2 ಕೆಜಿ 610 ಗ್ರಾಂ ಚಿನ್ನ ಪತ್ತೆ

    ನಂತರ ಇತ್ತೀಚಿಗೆ ತನ್ನ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದ ಆರೋಪಿಯು, ಸುತ್ತ ಮುತ್ತಲಿನವರ ಜತೆಗೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದನು. ಇತ್ತೀಚೆಗಷ್ಟೇ ಬಾಕಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸಿ ಅಪರಾಧಿಗಳನ್ನು ಜೈಲಿಗೆ ಕಳುಹಿಸುವಂತೆ ಎಸ್ಪಿ ಮನೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಕಳ್ಳನನ್ನು ಹಿಡಿಯಲು ಪೊಲೀಸರು ಹುಡುಕಾಟ ನಡೆಸಿದ್ದ ವೇಳೆ ಆತ ಮನೆಯಲ್ಲಿಯೇ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೃಷ್ಣ ಬ್ರಹ್ಮಾವರ ಪೊಲೀಸರು ಕಳ್ಳನ ಮನೆಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಅಲ್ಲದೇ, ಮತ್ತೊಂದು ಕೊಲೆ ಪ್ರಕರಣದ ಆರೋಪಿ ಜಿತೇಂದ್ರ ರಾಮ್ ಎಂಬಾತನನ್ನೂ ಬಂಧಿಸಲಾಗಿದೆ. ಜಿತೇಂದ್ರ ರಾಮ್ ಕೂಡ ಬಹಳ ದಿನಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದನು.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts