More

    ನಡುರಸ್ತೆಯಲ್ಲೇ ಹೊತ್ತಿ ಉರಿದ ವಿಶ್ವದ ಪ್ರತಿಷ್ಠಿತ ಕಂಪನಿಯ ಕಾರು: ಜನನಿಬಿಡ ರಸ್ತೆಯಲ್ಲಿ ನಡೆದ ಘಟನೆ

    ಚೆನ್ನೈ: ವಿಶ್ವದ ಪ್ರತಿಷ್ಠಿತ ಕಾರು ತಯಾರಿಕ ಕಂಪನಿಗಳಲ್ಲಿ ಒಂದಾದ ಬಿಎಂಡಬ್ಲೂಗೆ ಸೇರಿದೆ ಎನ್ನಲಾದ ಕಾರೊಂದು ಜನನಿಬಿಡ ರಸ್ತೆಯ ಮಧ್ಯದಲ್ಲಿ ಹೊತ್ತಿ ಉರಿದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಇದನ್ನೂ ಓದಿ: ವಿಶ್ವದಲ್ಲೇ ಗರಿಷ್ಠ ದ್ವಿಚಕ್ರ ವಾಹನ ಹೊಂದಿರುವ ದೇಶ ಭಾರತ: ಈ ರಾಷ್ಟ್ರವನ್ನು ಹಿಂದಿಕ್ಕಿ ಅಗ್ರಸ್ಥಾನ..

    ಮಂಗಳವಾರ ಬೆಳಗ್ಗೆ ನಿರಂತರ ಮಳೆಯ ನಡುವೆ ಜನರು ತಮ್ಮ ಕೆಲಸದ ಸ್ಥಳಗಳಿಗೆ ಧಾವಿಸುತ್ತಿರುವಾಗ ಜನನಿಬಿಡ ರಸ್ತೆಯಲ್ಲಿ ಕ್ರೋಮ್‌ಪೇಟೆ ಬಳಿ ಈ ಘಟನೆ ನಡೆದಿದ್ದು, ಅರುಣ್ ಬಾಲಾಜಿ (37) ಎಂಬುವರಿಗೆ ಸೇರಿದ ಕಾರು ಇದಾಗಿದ್ದು. ಟ್ರಿಪ್ಲಿಕೇನ್‌ನಿಂದ ದಿಂಡಿವನಂಗೆ ತೆರಳುತ್ತಿದ್ದ ವೇಳೆ ಹೊಗೆ ಬರುತ್ತಿದ್ದನ್ನು ಗಮನಿಸಿದ ಕಾರು ಚಾಲಕ ಪಾರ್ಥಸಾರಥಿ ಕಾರನ್ನು ನಿಲ್ಲಿಸಿದ್ದಾನೆ.


    ಆತ ಕೆಳಗಿಳಿಯುತ್ತಿದ್ದಂತೆಯೇ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 30 ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಸ್ತವ್ಯಸ್ತವಾಯಿತು. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಷಾರಾಮಿ ಕಾರು ಕೆಲವೇ ನಿಮಿಷಗಳಲ್ಲಿ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದು, ಬಿಎಂಡಬ್ಲ್ಯು ಉಳಿಸುವ ಪ್ರಯತ್ನದ ಹೊರತಾಗಿಯೂ ಸುಟ್ಟು ಕರಕಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

    ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಕಾರುಗಳಿಗೆ ಬೆಂಕಿ ತಗುಲುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಒಂದು ವಾರದ ಹಿಂದೆ ಪುಣೆಯ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಮರ್ಸಿಡಿಸ್ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಕಾರಿನಲ್ಲಿದ್ದ ಮೂವರು ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts