More

    25 ವರ್ಷ, 12ಕ್ಕೂ ಹೆಚ್ಚು ರಾಜ್ಯಗಳಲ್ಲಿ 1200 ಕಳ್ಳತನ ಮಾಡಿದ್ದ ಖತರ್ನಾಕ್​ ಕಳ್ಳ​​..!

    ಕೋಲ್ಕತಾ: 14 ರಾಜ್ಯಗಳಲ್ಲಿ 1200 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ.

    ಇದನ್ನೂ ಓದಿ: ಯುವಕ ಯುವತಿಯರಿಗೆ ಕಡಿವಾಣ ಹಾಕಲು ಮುಂದಾದ ಸಮುದಾಯ: ಇಲ್ಲಿ ಅಂತರ್ಜಾತಿ ಮದುವೆಯಾದರೆ 1 ಲಕ್ಷ ರೂ. ದಂಡ…

    ಬಂಧಿತ ಆರೋಪಿಯನ್ನು ನದೀಮ್​ ಖುರೇಷಿ (45) ಎಂದು ಗುರುತಿಸಲಾಗಿದ್ದು, ಈತ 25 ವರ್ಷಗಳಲ್ಲಿ 12 ರಾಜ್ಯಗಳಲ್ಲಿ 1,200 ಕಳ್ಳತನಗಳನ್ನು ಮಾಡಿದ್ದಾನೆ. ದರೋಡೆ ಮಾಡಿ ಕೋಟಿಗಟ್ಟಲೆ ಸಂಪಾದಿಸಿದ್ದ ಈತನನ್ನು ಬಿಧಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಮುಂಬೈ ಮತ್ತು ಪುಣೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿರುವ ಆರೋಪಿಯು, ಐಷಾರಾಮಿ ಬಟ್ಟೆಗಳನ್ನು ಧರಿಸುತ್ತಿದ್ದರಿಂದ ಈತನ ಮೇಲೆ ಅನುಮಾನ ಬರುತ್ತಿರಲಿಲ್ಲ. ಈತನ ಹದಿಹರೆಯದ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದು, ಐಷಾರಾಮಿ ಕಾರುಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಾರೆ.

    ಮುಂಬೈ ಮತ್ತು ಪುಣೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ನದೀಮ್ ಹದಿಹರೆಯದವನಾಗಿದ್ದಾಗಲೇ ಅಪರಾಧಗಳನ್ನು ಮಾಡಲು ಪ್ರಾರಂಭಿಸಿದ್ದು, ಈತ 5ನೇ ತರಗತಿ ವಿದ್ಯಾರ್ಥಿಯಾಗಿದ್ದಲೇ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ದನಗಳನ್ನು ಕದಿಯುವ ಮೂಲಕ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದನು. ಹದಿನೇಳನೇ ವಯಸ್ಸಿನಲ್ಲಿ ಹಲವಾರು ಕಳ್ಳತನ ಮಾಡಿದ್ದ ಈತ ಕಳೆದ ಕೆಲವು ವರ್ಷಗಳಲ್ಲಿ ಖುರೇಷಿ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾನೆ.

    ಇದನ್ನೂ ಓದಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ವಿಶ್ವದ ಪ್ರತಿಷ್ಠಿತ ಕಂಪನಿಯ ಕಾರು: ಜನನಿಬಿಡ ರಸ್ತೆಯಲ್ಲಿ ನಡೆದ ಘಟನೆ

    2021ರಲ್ಲಿ ಸೌರವ್ ಅಬಾಸನ್‌ನಲ್ಲಿರುವ ಎರಡು ಫ್ಲಾಟ್‌ಗಳಲ್ಲಿ 12 ಲಕ್ಷ ರೂಪಾಯಿ ಮೌಲ್ಯದ ದರೋಡೆ ನಡೆಸಿದ ನಂತರ ಖುರೇಷಿಯನ್ನು ಪತ್ತೆಹಚ್ಚಲಾಗಿತ್ತು ಆದರೆ ಈ ವೇಳೆ ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಬೇರೆ ಪ್ರಕರಣದಲ್ಲಿ 2021ರ ಗಾಜಿಯಾಬಾದ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಮೊದಲು ರಾಜಸ್ಥಾನ ಪೊಲೀಸರು ಬಂಧಿಸಿದ್ದು, ಶಿಕ್ಷೆಗೊಳಗಾದ ನಂತರ ಆತನನ್ನು ದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿತ್ತು.

    ಸದ್ಯ 2021ರ ಸಾಲ್ಟ್ ಲೇಕ್‌ನಲ್ಲಿರುವ ಸೌರವ್ ಅಬಾಸನ್ ಎಂಬುವವರ ಎರಡು ಫ್ಲಾಟ್‌ಗಳಿಂದ 12 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಖತರ್ನಾಕ್​ ಕಳ್ಳನನ್ನು ಮತ್ತೆ ಬಂಗಾಳಕ್ಕೆ ಕರೆತರಲಾಗಿದೆ. 23 ಪ್ರಕರಣಗಳಲ್ಲಿ ಘೋಷಿತ ಅಪರಾಧಿಯಾಗಿರುವ ಈತನನ್ನು ಕನಿಷ್ಠ ಎಂಟು ಬಾರಿ ಬಂಧಿಸಲಾಗಿದೆ. ಈತ ‘ನದೀಮ್ ಗ್ಯಾಂಗ್’ ಎಂಬ ತಂಡವನ್ನು ರಚಿಸಿ, ತರಬೇತಿ ನೀಡಿದ್ದ. ಈ ಗುಂಪು ಕೂಡ ಖುರೇಷಿಯಂತೆ ಕಳ್ಳತನ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts