ವಿಜಯಪುರಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿ! ಸಾವರ್ಜನಿಕರು ಎಚ್ಚರದಿಂದಿರಲು ಪೊಲೀಸ್ ಇಲಾಖೆಯಿಂದ ಅನೌನ್ಸ್​ಮೆಂಟ್

Chaddi Gang
Published on

ವಿಜಯಪುರ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ ವಿಜಯಪುರಕ್ಕೆ ಎಂಟ್ರಿ ಕೊಟ್ಟಿರುವ ಖತರ್ನಾಕ್​ ಚಡ್ಡಿ ಗ್ಯಾಂಗ್ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ!

ಕಳೆದ ಹಲವು ದಿನಗಳಿಂದ ವಿಜಯಪುರ ನಗರದಲ್ಲಿ ಬೀಡು ಬಿಟ್ಟಿರುವ ಚಡ್ಡಿ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಚಡ್ಡಿ ಧರಿಸಿ, ಮಾಸ್ಕ್ ಮತ್ತು ಮಫ್ಲರ್ ಹಾಕಿ ಗುಂಪುಗೂಡಿ ಕಳ್ಳತನಕ್ಕಿಳಿಯುವ ಈ ಗ್ಯಾಂಗ್​ನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಪೊಲೀಸ್​ ಇಲಾಖೆ ಅಲರ್ಟ್​

ಬಿಗ್ ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಸಾರ್ವಜನಿಕರನ್ನು ಎಚ್ಚರಗೊಳಿಸುವುದರ ಜೊತೆಗೆ ಚಡ್ಡಿ ಗ್ಯಾಂಗ್ ಪತ್ತೆಗೆ ವ್ಯಾಪಕ ಜಾಲ ಬೀಸಿದೆ. ಇದಿಷ್ಟೇ ಅಲ್ಲದೆ, ಆಟೋ, ವಾಟ್ಸ್​ಆ್ಯಪ್​ ಸಂದೇಶದ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸಲಾಗುತ್ತಿದೆ. ಇಂಥ ಚಡ್ಡಿ ಗ್ಯಾಂಗ್ ಕಂಡುಬಂದರೆ ಮೊ. 9480804200 ಅಥವಾ 112ಕ್ಕೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net