More

    ನೀವು ತೂಕ ಕಳೆದುಕೊಳ್ಳಲು ಬಯಸುತ್ತೀರಾ? ಈ ರೀತಿ ಆ್ಯಪಲ್​ ಜ್ಯೂಸ್​ ಟ್ರೈ ಮಾಡಿ ಫಲಿತಾಂಶ ಪಕ್ಕಾ!

    ಆಧುನಿಕ ಕಾಲದಲ್ಲಿ ತೂಕ ನಷ್ಟವು ಒಂದು ಪ್ರಮುಖ ಸಮಸ್ಯೆಯಾಗಿದೆ. ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಕೆಲಸದ ಹೊರೆ ಹಾಗೂ ಒತ್ತಡ ಸೇರಿದಂತೆ ಇತ್ಯಾದಿ ಅಂಶಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

    ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ಫಲಿತಾಂಶ ಸಿಗ್ತಾ ಇಲ್ಲ ಅಂತ ಚಿಂತಿಸುತ್ತಾರೆ. ಆದ್ದರಿಂದ ತೂಕ ಇಳಿಸುವ ಯೋಚನೆ ನಿಮ್ಮಲ್ಲಿದ್ದರೆ ಒಮ್ಮೆ ಈ ಕೆಳಗಿನ ವಿಧಾನದಲ್ಲಿ ಆ್ಯಪಲ್​ ಜ್ಯೂಸ್​ ಮಾಡಲು ಪ್ರಯತ್ನಿಸಿ. ತೂಕ ಇಳಿಸುವ ಈ ಆ್ಯಪಲ್​ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಕುಡಿದರೆ ಒಂದೇ ವಾರದಲ್ಲಿ ನಿಮ್ಮ ದೇಹದಲ್ಲಿ ವ್ಯತ್ಯಾಸ ಕಾಣುವುದು.

    ಮಾಡುವುದು ಹೇಗೆ?
    ತೂಕ ನಷ್ಟಕ್ಕೆ ಆ್ಯಪಲ್​ ಜ್ಯೂಸ್​ ತಯಾರಿಸುವುದು ತುಂಬಾ ಸುಲಭ. ಒಂದು ಗ್ರೀನ್ ಟೀ ಪ್ಯಾಕೆಟ್, ಒಂದು ಕಪ್​ ಕತ್ತರಿಸಿದ ಸೇಬು, 1/4 ಕಪ್​ ಶುಂಠಿ, 2 ಚಮಚ ಆ್ಯಪಲ್ ಸೈಡರ್ ವಿನೆಗರ್ ಮತ್ತು ಮೂರು ಚಮಚ ನಿಂಬೆ ರಸ ತೆಗೆದುಕೊಳ್ಳಿ. ಮೊದಲು ಗ್ರೀನ್ ಟೀ ಬ್ಯಾಗ್ ತೆಗೆದುಕೊಂಡು ಅದನ್ನು 200 ಮಿಲಿ ಬಿಸಿ ನೀರಿನಲ್ಲಿ ಚೆನ್ನಾಗಿ ನೆನೆಸಿ. ನಂತರ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ 1 ಕಪ್ ಮಧ್ಯಮ ಗಾತ್ರದ ಸೇಬನ್ನು ಸೇರಿಸಿ. ಇದಕ್ಕೆ ತುರಿದ ಶುಂಠಿ, ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ರಸವನ್ನು ಸೇರಿಸಿ. ಈಗಾಗಲೇ ಸಿದ್ಧಪಡಿಸಿದ ಗ್ರೀನ್​ ಟೀ ನೀರು ಸೇರಿದಂತೆ ಎಲ್ಲ ಪದಾರ್ಥಗಳನ್ನು ಸೇರಿಸಿ. ಚೆನ್ನಾಗಿ ತಣ್ಣಗಾದ ನಂತರವೇ ಮಿಶ್ರಣ ಮಾಡಿ.

    ಎಲ್ಲ ಸಾಮಗ್ರಿಗಳನ್ನು ಮಿಶ್ರಣ ಮಾಡಿ, ಮಿಕ್ಸಿಯಲ್ಲಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಈ ಸಿದ್ಧಪಡಿಸಿದ ತೂಕ ನಷ್ಟ ರಸವನ್ನು ಫಿಲ್ಟರ್ ಮಾಡಬಾರದು. ಇದನ್ನು ಒಂದು ಟಂಬ್ಲರ್‌ನಲ್ಲಿ ಸುರಿದು ಕುಡಿಯಿರಿ.

    ಅಧಿಕ ತೂಕವು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ಥೂಲಕಾಯತೆಯು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಅಧಿಕ ತೂಕದ ಜೊತೆಗೆ ಉಸಿರಾಟದ ಸಮಸ್ಯೆಗಳೂ ಬರುತ್ತವೆ. ದೇಹದಲ್ಲಿ ಹೆಚ್ಚಿನ ಕೊಬ್ಬು ಇದ್ದರೆ, ಶ್ವಾಸಕೋಶದ ಶ್ವಾಸನಾಳಗಳು ಸಂಕುಚಿತಗೊಳ್ಳುತ್ತವೆ. ಹೀಗಾಗಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಇದು ದೇಹಕ್ಕೆ ಒಳ್ಳೆಯದು. ಅದಕ್ಕಾಗಿ ಈ ಆ್ಯಪಲ್​ ಜ್ಯೂಸ್​ ಟ್ರೈ ಮಾಡಿ. (ಏಜೆನ್ಸೀಸ್​)

    ಫೋನ್​ನಲ್ಲಿ ಮಾತನಾಡುತ್ತಲೇ ಹಸ್ತಮೈಥುನ! ಖ್ಯಾತ ಯೂಟ್ಯೂಬರ್​ ಆರ್ಯಗೆ ಆಘಾತ

    ಕಾಫ್ ಸಿರಪ್ ಕುಡಿಸಿ ಮಗನನ್ನು ಕೊಂದ ಸುಚನಾ?; ವಿಚಾರಣೆ ವೇಳೆ ಪೊಲೀಸರ ಶಂಕೆ

    ಅಯೋಧ್ಯೆಯಲ್ಲಿ ಜಾಗ ಖರೀದಿಸಲು ಬಯಸುತ್ತೀರಾ?; ಈ ವಿಷಯ ತಿಳಿಯುವುದು ಉತ್ತಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts