ಕಲ್ಕತ್ತಾ: ವಿಚಾರ ಒಂದಕ್ಕೆ ಮಹಿಳೆಯರು ಲೋಕಲ್ ರೈಲಿನಲ್ಲಿ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳ ಕಲ್ಕತ್ತಾದಲ್ಲಿ ನಡೆದಿದೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾವ ಕಾರಣಕ್ಕೆ ಗಲಾಟೆ ಆಗಿರಬಹುದು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಘಟನೆಯೂ ಜುಲೈ 11ರಂದು ನಡೆದಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ಕೈಯಲ್ಲಿ ಚಪ್ಪಲಿ ಹಾಗೂ ಜುಟ್ಟನ್ನು ಹಿಡಿದು ಹೊಡೆದಾಡುತ್ತಿರುವುದು ಕಂಡು ಬರುತ್ತದೆ.
ಈ ನಡುವೆ ಸಹ ಪ್ರಯಾಣಿಕರು ಗಲಾಟೆಯನ್ನು ಬಿಡಿಸಲು ಮುಂದಾದರು ಸಹ ಯಾವುದೇ ಪ್ರಯೋಜವಾಗಿಲ್ಲ. ಈ ವಿಡಿಯೋ ಕುರಿತು ನೆಟ್ಟಿಗರು ತಮ್ಮ ಕಮೆಂಟಗಳನ್ನು ಹಾಕುತ್ತಿದ್ದು, ಯಾವುದೇ ಕಾರಣಕ್ಕೂ ತಪ್ಪು ಮಾಡಿ ಇಂತಹವರ ಕೈಗೆ ಸಿಗಬೇಡಿ ಎಂದು ಹೇಳಿದ್ದಾರೆ.