ಬೆಂಗಳೂರು: ಕಾಂಗ್ರೆಸ್ನ ಗ್ಯಾರಂಟಿಗಳ ಪೈಕಿ ಒಂದಾಗಿರುವ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ನಲ್ಲಿ ಮಹಿಳೆಯರು ಜಗಳ ಮಾಡಿಕೊಂಡ ಹಲವಾರು ಪ್ರಕರಣಗಳು ನಡೆದಿವೆ. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಸೀಟ್ಗಾಗಿ ಮಹಿಳೆಯರಿಬ್ಬರು ಭಾರಿ 'ಶಕ್ತಿ' ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ತುಮಕೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಬಸ್ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದು, ತುಮಕೂರಿನಲ್ಲಿ ಕೆಲಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ವಾಶ್ರೂಮ್ಗೆ ಹೋಗಿ ಬರುವಷ್ಟರಲ್ಲಿ ಇನ್ನೊಬ್ಬಾಕೆ ಅಲ್ಲಿ ಆ ಸೀಟ್ನಲ್ಲಿ ಬಂದು ಕುಳಿತಿದ್ದರು ಎಂಬ ಕಾರಣಕ್ಕೆ ಈ ಜಗಳ ನಡೆದಿದೆ.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇವರಿಬ್ಬರು ಜಡೆ ಹಿಡಿದು ಜಗಳ ಮಾಡಿಕೊಂಡಿದ್ದು, ಬಿಡಿಸಲು ಹೋದ ಕಂಡಕ್ಟರ್ಗೂ ಡೋಂಟ್ ಕೇರ್ ಎಂದಿದ್ದಾರೆ. ಬಳಿಕ ಬೇರೆ ದಾರಿ ಇಲ್ಲದೆ ತುಮಕೂರು ಟೌನ್ ಪೋಲಿಸ್ ಠಾಣೆಯತ್ತ ಬಸ್ ಚಲಾಯಿಸಿ, ಚಾಲಕ-ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ಗಮನಕ್ಕೆ ತಂದು ಬಳಿಕ ಬಸ್ ಪ್ರಯಾಣ ಮುಂದುವರಿದಿದೆ.