Blood Moon: ಸಾಮಾನ್ಯ ಸಮಯದಲ್ಲಿ ರಾತ್ರಿ ಚಂದಿರನನ್ನು ನೋಡಿದಾಗ ತುಂಬಾ ಮಾಂತ್ರಿಕವಾಗಿ ಕಾಣಿಸುತ್ತೆ. ಅದೇ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ? ಈ ವಿಷಯ ನಿಜಕ್ಕೂ ಅಚ್ಚರಿ ಹಾಗೂ ಕುತೂಹಲ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಚಂದ್ರಗ್ರಹಣದಿಂದ ಉಂಟಾಗುವ ಈ ವಿಶೇಷ ದೃಶ್ಯವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಬ್ಲಡ್ ಮೂನ್ ಇದೇ ಸೆಪ್ಟೆಂಬರ್ 7-8ರ ರಾತ್ರಿ ಗೋಚರಿಸಲಿದೆ.
ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ಧ್ವಂಸ; ಸ್ಮಾರಕ ನಿರ್ಮಿಸೋಕೆ ಅಭಿಮಾನಿಗಳ ಜೊತೆ ನಾವಿದ್ದೇವೆ ಎಂದ ‘ಅನಿರುದ್ಧ್’| Vishnuvardhan
ಆ ದಿನ ಚಂದಿರನನ್ನು ನೋಡುವವರನ್ನು ಮೋಡಿ ಮಾಡುವ ಈ ಮಾಂತ್ರಿಕ ದೃಶ್ಯದ ಬಗ್ಗೆ ನಾಸಾ ಹೇಳುವುದೇನು? ಯಾಕಾಗಿ ಕೆಂಪು ಬಣ್ಣದಲ್ಲಿ ಗೋಚರಿಸುತ್ತದೆ ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ಈ ವರ್ಷದ ಎರಡನೇ ಚಂದ್ರಗ್ರಹಣವಿದು. ಇದು ಹಾರ್ವೆಸ್ಟ್ ಮೂನ್‌ನೊಂದಿಗೆ ಬರುತ್ತದೆ. ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದಾಗ (ಪೆರಿಜಿ) ರಕ್ತ ಚಂದಿರ ಸಂಭವಿಸುತ್ತದೆ. ಆದ್ದರಿಂದ, ಚಂದ್ರನು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. (ಬ್ಲಡ್ ಮೂನ್) ಪೆರಿಜಿ ಎಂದರೆ ಚಂದ್ರನು ಭೂಮಿಗೆ ಹತ್ತಿರದಲ್ಲಿರುವ ಬಿಂದು.
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಇರುವಾಗ ಸಂಭವಿಸುವುದೇ ಚಂದ್ರಗ್ರಹಣ. ಈ ಸಮಯದಲ್ಲಿ, ಸೂರ್ಯನ ಬೆಳಕು ಚಂದಿರನನ್ನು ತಲುಪುವುದಿಲ್ಲ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಮಯದಲ್ಲಿ, ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕು ಚಂದ್ರನನ್ನು ಕೆಂಪು ಮತ್ತು ಕಿತ್ತಳೆ ಬಣ್ಣಗಳಲ್ಲಿ ಆವರಿಸುತ್ತದೆ.
ಇದನ್ನೂ ಓದಿ: ರಾಹುಲ್ ಗಾಂಧಿಯ ಮತಗಳ್ಳತನ ಆರೋಪ; ಇದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದ ಚುನಾವಣಾ ಆಯೋಗ| Election Commission
ನಾಸಾ ಪ್ರಕಾರ, ಈ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.
ಸಂಪೂರ್ಣ ಚಂದ್ರಗ್ರಹಣವನ್ನು ನೋಡಲು, ನೀವು ಒಂದು ಗಂಟೆ 15 ನಿಮಿಷಗಳ ಮೊದಲು ವೀಕ್ಷಿಸಲು ಪ್ರಾರಂಭಿಸಬೇಕು. ಚೀನಾ, ಥೈಲ್ಯಾಂಡ್, ಜಪಾನ್, ಇರಾನ್ ಮತ್ತು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಬೈನಾಕ್ಯುಲರ್‌ಗಳು ಅಥವಾ ವಿಶೇಷ ಉಪಕರಣಗಳಿಲ್ಲದೆಯೂ ಇದನ್ನು ಆಕಾಶದಲ್ಲಿ ಕಾಣಬಹುದಾಗಿದೆ,(ಏಜೆನ್ಸೀಸ್).