ಅಂದು ನಾನು ಹೇಳಿದ್ದನ್ನು ಯಾರೊಬ್ಬರು ಪರಿಗಣಿಸಲಿಲ್ಲ! ಆದ್ರೆ RCB...: ಅಶ್ವಿನ್​ ಓಪನ್​ ಟಾಕ್​ | R Ashwin

ವಿಜಯವಾಣಿ (92)
Published on

R Ashwin: ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ತಾನು ಹೇಳಿದ್ದನ್ನು ಯಾರೊಬ್ಬರೂ ಸಹ ಕೇಳಲಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​, ಆಲ್​ರೌಂಡರ್​ ಟಿಮ್ ಡೇವಿಡ್ ಅವರನ್ನು ತೆಗೆದುಕೊಳ್ಳುವಂತೆ ಒಂದಷ್ಟು ಫ್ರಾಂಚೈಸಿಗಳಿಗೆ ನಾನು ಸೂಚಿಸಿದ್ದೆ. ಆದರೆ, ನನ್ನ ಸಲಹೆಯನ್ನು ಯಾರೂ ಸಹ ಪರಿಗಣಿಸಲಿಲ್ಲ ಎಂದು ಆರ್​.ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನ ಚರ್ಚೆಯಲ್ಲಿ ಹೇಳಿಕೊಂಡಿದ್ದಾರೆ.

"ಅಷ್ಟಕ್ಕೂ ಇದನ್ನು ನಾನು ಈಗ ಹೇಳಬಾರದು. ಆದರೂ ಸಹ ಹೇಳುತ್ತಿರುವೆ. ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ನಾನು ಕೆಲವು ಫ್ರಾಂಚೈಸಿಗಳಿಗೆ ಟಿಮ್​ ಡೇವಿಡ್​ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದೆ. ಆತನನ್ನು ಖರೀದಿಸುವುದರಿಂದ ತುಂಬಾ ಪ್ರಯೋಜನವಿದೆ ಎಂದು ವಿಶೇಷವಾಗಿ ಸೂಚಿಸಿದ್ದೆ. ಆದಾಗ್ಯೂ, ಆ ಸಮಯದಲ್ಲಿ ಅನೇಕ ಫ್ರಾಂಚೈಸಿಗಳು ಅವರ ಕಳಪೆ ಫಾರ್ಮ್‌ ನೋಡಿಯೂ ಕರೆದುಕೊಂಡರೆ, ಪ್ರದರ್ಶನ ಇನ್ನಷ್ಟು ಹದಗೆಡುತ್ತದೆ ಎಂದು ಭಾವಿಸಿದರು. ಇದರಿಂದ ಡೇವಿಡ್​ರನ್ನು ಖರೀದಿಯಿಂದ ಕೈಬಿಟ್ಟರು" ಎಂದು ಹೇಳಿದರು.

"ಈ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೇವಿಡ್​ರನ್ನು ಕೇವಲ 3 ಕೋಟಿ ರೂ.ಗೆ ಖರೀದಿಸಿತು. ಟಿ20 ಫಾರ್ಮೆಟ್​ನ ಭವಿಷ್ಯವು ಸ್ಟೋಟಕ ಬ್ಯಾಟರ್​ಗಳಿಂದ ಪ್ರಾಬಲ್ಯ ಸಾಧಿಸುತ್ತದೆ. ಮುಂಬರುವ ಆವೃತ್ತಿಯಲ್ಲಿ ಅವರು ಆರ್​ಸಿಬಿಯಲ್ಲೇ ಮುಂದುವರಿಯುತ್ತಾರೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net