ಸುಳ್ಯ/ಬದಿಯಡ್ಕ: ದಕ್ಷಿಣ ಕನ್ನ ಜಿಲ್ಲೆಯ ಪಾಣತ್ತೂರು ಬಳಿ ಮದವೆ ದಿಬ್ಬಣದ ಬಸ್ ಪಲ್ಟಿಯಾದ ಪ್ರಕರಣದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ.
ಪುತ್ತೂರು ಕಡೆಯಿಂದ ಸುಳ್ಯ ಅಲೆಟ್ಟಿ ಮೂಲಕ ಪಾಣತ್ತೂರು ಕರಿಕೆ ಕಡೆಗೆ ಭಾನುವಾರ ಹೋಗುತ್ತಿದ್ದ ಮದವೆ ದಿಬ್ಬಣದ ಖಾಸಗಿ ಬಸ್ ನಿಯಂತ್ರಿಣ ತಪ್ಪಿ ಮನೆಯೊಂದರ ಮೇಲೆ ಉರುಳಿತ್ತು.
ವರನ ಸ್ವಗೃಹ ಕೊಡಗು ಜಿಲ್ಲೆಯ ಚೆತ್ತುಕಯದಲ್ಲಿ ಮದವೆ ಕಾರ್ಯಕ್ರಮ ಇತ್ತು. ವಧುವಿನ ಸ್ವಗ್ರಾಮ ಈಶ್ವರಮಂಗಲದಿಂದ ವಧುವಿನ ಮನೆಯವರು ಖಾಸಗಿ ಬಸ್ನಲ್ಲಿ ದಿಬ್ಬಣ ತೆರಳತ್ತಿದ್ದರು. ಬಸ್ನಲ್ಲಿ 60ಕ್ಕೂ ಹೆಚ್ಚು ಮಂದಿ ಇದ್ದರೆನ್ನಲಾಗಿದೆ. ಕಲ್ಲಪಳ್ಳಿ-ಪಾಣತ್ತೂರು ಮಧ್ಯೆ ಪೆರಿಯಾರಂ ಎಂಬಲ್ಲಿ ಬೆಳಗ್ಗೆ 11.30ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆ ಮೇಲೆ ಬಿದ್ದಿದೆ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಪಾಣತ್ತೂರು, ಪೂಡಂಕಲ್ಲು, ಕಾಞಂಗಾಡ್ ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ ಬಿದ್ದ ಪರಿಣಾಮ ಭಾಸ್ಕರನ್ ಎಂಬುವರ ಮನೆ ಭಾಗಶಃ ಹಾನಿಗೊಂಡಿದೆ. ಬಸ್ ಉರುಳಿದ ಸಮಯದಲ್ಲಿ ಆ ಮನೆಯಲ್ಲಿ ಯಾರೂ ಇರಲಿಲ್ಲ.
ಬಸ್ ಅಪಘಾತ ಪ್ರಕರಣದ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ. ಅಪರ ಜಿಲ್ಲಾಧಿಕಾರಿಗೆ ತನಿಖೆಯ ಉಸ್ತುವಾರಿ ವಹಿಸಲಾಗಿದೆ. ಬಸ್ ಅನಾಹುತಕ್ಕೆ ಕಾರಣ ಏನು ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್ಬಾಬು ಹೇಳಿದ್ದಾರೆ.