ನ್ಯೂಸ್

VIDEO| ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯನ್ನು ಥಳಿಸಿದ ಬಿಜೆಪಿ ಸಚಿವ!

Webdesk - Manjunatha B

ಡೆಹ್ರಾಡೂನ್​: ಉತ್ತರಾಖಂಡದ ಬಿಜೆಪಿ ಸರ್ಕಾರದ ಸಚಿವರೊಬ್ಬರು ಜನನಿಬಿಡ ಪ್ರದೇಶದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಉತ್ತರಾಖಂಡದ ರಿಷಿಕೇಷದಲ್ಲಿ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪರ-ವಿರೋಧದ ಚರ್ಚೆಯಾಗುತ್ತಿದೆ.

ಮಾತಿನ ಚಕಮಕಿ

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರೇಮ್​ಚಂದ್​ ಅಗರ್​ವಾಲ್​ ಟ್ರಾಫಿಕ್​ ಸಮಸ್ಯೆ ಉಂಟಾಗಿದ್ದ ಕಾರಣ ಮೊದಲು ನನ್ನನ್ನು ಗುರಿಯಾಗಿಸಿ ಬೈಯಲು ಶುರು ಮಾಡಿದ್ದರು ಮತ್ತು ಕೆಟ್ಟ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾರೆ.

ಇದಾದ ಕೆಲವೇ ನಿಮಿಷಗಳ ಬಳಿಕ ಇಬ್ಬರು ಯುವಕರು ನನ್ನ ಹಾಗೂ ಭದ್ರತಾ ಸಿಬ್ಬಂದಿಯ ಬಟ್ಟೆಯನ್ನು ಹರಿದು ಹಲ್ಲೆ ನಡೆಸಲು ಮುಂದಾಗಿದ್ದಾರೆ ಇದನ್ನು ತಡೆಯುವ ಸಲುವಾಗಿ ನಾವು ಅವರ ಮೇಲೆ ಹಲ್ಲೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ವಿಪಕ್ಷ ನಾಯಕ ಕರಣ್​ ಮಹಾರಾ ಬಿಜೆಪಿಯ ಸಚಿವರು ಜನರನ್ನು ನೊಣದಂತೆ ಕಾಣುತ್ತಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿ ಒಬ್ಬನ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ಎಸ್​. ಕುನ್ವರ್​ ಮೊದಲಿಗೆ ಸುರೇಂದ್ರ ಸಿಂಗ್​ ನೇಗಿ ಹಾಗೂ ಆತನ ಜೊತೆ ಇದ್ದ ವ್ಯಕ್ತಿ ಸಚಿವರಿಗೆ ನಿಂದಿಸಿ ಗಲಾಟೆ ತೆಗೆದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.