Gold Rates: ಕಳೆದ ಒಂದು ವಾರದಿಂದ ಷೇರು ಪೇಟೆಯ ಏರುಪೇರಿನಿಂದ ಚಿನ್ನದ ದರದಲ್ಲಿ ಗಣನೀಯವಾಗಿ 300ರಿಂದ 900 ರೂ. ರವರೆಗೂ ಹೆಚ್ಚಳ ಕಂಡುಬಂದಿದೆ. ಇದು ಚಿನ್ನ ಖರೀದಿದಾರರನ್ನು ಅಕ್ಷರಶಃ ಚಿಂತೆಗೆ ದೂಡಿದೆ. ಇನ್ನೇನು ಮದುವೆ, ಶುಭಕಾರ್ಯಗಳ ಸೀಸನ್ ಶುರುವಾಗುವ ಸಮಯ ಹತ್ತಿರವಾಗುತ್ತಿದ್ದಂತೆಯೇ ಇತ್ತ ಚಿನ್ನದ ದರಗಳು ಗಗನಕ್ಕೇರುತ್ತಿವೆ. ಪ್ರಸ್ತುತ ವರದಿಗಳ ಪ್ರಕಾರ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಈಗ 98,100 ರೂ. ಆಗಿದೆ. ಈ ಸಂಗತಿ 'ಚಿನ್ನ'ದ ಗ್ರಾಹಕರನ್ನು ಕಂಗಾಲಾಗಿಸಿದೆ.
ಇದನ್ನೂ ಓದಿ: ಸೋಲುವ ಪಂದ್ಯ ಗೆದ್ದೆವು; ಇದಕ್ಕೆಲ್ಲ ಆತನೊಬ್ಬನೇ ಕಾರಣ! RR ವಿರುದ್ಧ ಗೆದ್ದ ಬಳಿಕ ಅಕ್ಸರ್ ಪಟೇಲ್ ಮನದ ಮಾತು | Axar Patel
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ,(ಏಜೆನ್ಸೀಸ್).