ಹೈದರಾಬಾದ್: ಒಂದೇ ಕುಟುಂಬದ ಮೂವರು ಹುಡುಗಿಯರು ನಾಪತ್ತೆಯಾಗಿರುವ ಘಟನೆ ಹೈದರಾಬಾದ್ನ ವನಸ್ಥಲಿಪುರಂನಲ್ಲಿ ನಡೆದಿದ್ದು, ಸ್ಥಳೀಯ ಜನತೆಯನ್ನು ಆತಂಕಕ್ಕೆ ದೂಡಿದೆ.
ಮೂವರು ಸಹ ಸಹೋದರಿಯರಾಗಿದ್ದು, 17, 15 ಮತ್ತು 14 ವಯಸ್ಸಿನ ಹೆಣ್ಣು ಮಕ್ಕಳೆಂದು ತಿಳಿದುಬಂದಿದೆ. ಮೂವರು ಸಹ ಪ್ರಗತಿ ನಗರದಲ್ಲಿ ತಮ್ಮ ಪಾಲಕರೊಂದಿಗೆ ವಾಸವಿದ್ದರು.
ಶುಕ್ರವಾರ ಮನೆಯ ಹಿರಿಯ ಮಗಳು ಮತ್ತು ತಾಯಿಯ ನಡುವೆ ಜಗಳ ನಡೆದಿದೆ. ಈ ವೇಳೆ ಉಳಿದ ಇಬ್ಬರು ಸಹ ತನ್ನ ಸಹೋದರಿಯ ಬೆಂಬಲಕ್ಕೆ ನಿಂತು ತಾಯಿಯೊಂದಿಗೆ ಜಗಳ ಆಡಿದ್ದಾರೆಂದು ತಿಳಿದುಬಂದಿದೆ. ಆದರೆ, ಯಾವ ವಿಚಾರಕ್ಕೆ ಜಗಳ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ ಸಹೋದರಿಯರು ಶನಿವಾರ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಯಾರು ಸಹ ಪತ್ತೆಯಾಗಲಿಲ್ಲ. ಕೊನೆಗೆ ಕುಟುಂಬ ವನಸ್ಥಲಿಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)