More

    ಅಲಿಬಾಬಾಗೆ 20,551 ಕೋಟಿ ಡಾಲರ್ ದಂಡ

    ಶಾಂಘೈ: ಏಕಸ್ವಾಮ್ಯ ನಿಯಮ ಉಲ್ಲಂಘಿಸಿದ ಅಲಿಬಾಬಾ ಗ್ರೂಪ್​ಗೆ 20,551 ಕೋಟಿ ಡಾಲರ್ ದಂಡವನ್ನು ಚೀನಾ ಸರ್ಕಾರ ವಿಧಿಸಿದೆ. ಏಕಸ್ವಾಮ್ಯ ವಿರೋಧಿ ನಿಯಮ ಉಲ್ಲಂಘನೆ ಮತ್ತು ಮಾರುಕಟ್ಟೆ ಪ್ರಭುತ್ವದ ಮೂಲಕ ಅಧಿಕಾರ ದುರ್ಬಳಕೆಯ ಆರೋಪ ಅಲಿಬಾಬಾ ಗ್ರೂಪ್ ಮೇಲಿದೆ.

    ಚೀನಾ ಸರ್ಕಾರ ವಿಧಿಸಿರುವ ದಂಡ ಪ್ರಮಾಣವು (20,551 ಕೋಟಿ ಡಾಲರ್) ಅಲಿಬಾಬಾ ಗ್ರೂಪ್​ನ 2019ರ ಆದಾಯದ ಶೇಕಡ 4ರಷ್ಟಿದೆ. ಅಲಿಬಾಬಾ ಗ್ರೂಪ್ ಮೇಲೆ ನಿರ್ಬಂಧ ವಿಧಿಸಿದ ಕೆಲವು ತಿಂಗಳ ಬಳಿಕ ಸರ್ಕಾರ ಈ ದಂಡ ವಿಧಿಸಿದೆ. ಶತಕೋಟ್ಯಧಿಪತಿ ಜಾಕ್ ಮಾ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಚೀನಾದ ರೆಗ್ಯುಲೇಟರಿ ವ್ಯವಸ್ಥೆಯ ವಿರುದ್ಧ ಟೀಕೆ ಮಾಡಿದ್ದರು.

    ಇದರ ಬೆನ್ನಿಗೆ ಅವರ ವಾಣಿಜ್ಯ ಸಾಮ್ರಾಜ್ಯದ ಮೇಲೆ ಸರ್ಕಾರ ಕೆಂಗಣ್ಣು ಬಿತ್ತು. ಡಿಸೆಂಬರ್ ತಿಂಗಳಲ್ಲಿ ಚೀನಾದ ಸ್ಟೇಟ್ ಅಡ್ಮಿನಿಸ್ಟ್ರೇಶನ್ ಫಾರ್ ಮಾರ್ಕೆಟ್ ರೆಗ್ಯುಲೇಶನ್ ಅಲಿಬಾಬಾ ಗ್ರೂಪ್ ವಿರುದ್ಧದ ತನಿಖೆ ಶುರುಮಾಡಿತ್ತು. ಇದಕ್ಕೂ ಮೊದಲು ಕಂಪನಿಯು ಅದರ ಇಂಟರ್​ನೆಟ್ ಫೈನಾನ್ಸ್ ಕಂಪನಿ ಆಂಟ್ ಗ್ರೂಪ್​ನ 37 ಶತಕೋಟಿ ಡಾಲರ್ ಐಪಿಒ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆಲಿಬಾಬಾ ಕಂಪನಿಯು 2015ರಿಂದಲೇ ಇ-ಕಾಮರ್ಸ್ ತಾಣದ ಮೂಲ ವ್ಯಾಪಾರಿಗಳನ್ನು ಶೋಷಿಸುವ ಕೆಲಸ ಮಾಡಿತ್ತು ಎಂಬ ಆಪಾದನೆಯನ್ನೂ ಎದುರಿಸಬೇಕಾಗಿ ಬಂತು.

    ನಾರ್ವೆ ಪ್ರಧಾನಿಯನ್ನೂ ಬಿಡದ ಪೊಲೀಸರು; ಬರ್ತ್​ಡೇ ಆಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts