More

    ದುರ್ಬಳಕೆ: ಡೇಟಾ ಸುರಕ್ಷತೆಗೆ ಇ-ಕಾಮರ್ಸ್ ನೀತಿ

    ನವದೆಹಲಿ: ಅಂತರ್ಜಾಲ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಡೇಟಾ ಆಸ್ತಿ ಎಂಬುದನ್ನು ಒಪ್ಪಿಕೊಂಡಿರುವ ಸರ್ಕಾರ ಅದರ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಕರಡು ರಾಷ್ಟ್ರೀಯ ಇ-ಕಾಮರ್ಸ್ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಅಂತರ್ ಸಚಿವಾಲಯದ ಸಭೆ ಕೂಡ ನಡೆದಿದೆ.

    ಒಂಬತ್ತು ಪುಟಗಳ ಕರಡು ನಿಯಮದ ಅಂಶಗಳ ಪ್ರಕಾರ, ಭಾರತದಲ್ಲಿರುವ ಡೇಟಾ ಬಳಕೆಗೆ ಭಾರತೀಯ ಸಂಸ್ಥೆಗಳಿಗೇ ಆದ್ಯತೆ ನೀಡಬೇಕು. ಕೈಗಾರಿಕಾ ಅಭಿವೃದ್ಧಿಗಾಗಿ ಡೇಟಾ ಹಂಚಿಕೆಯನ್ನು ಉತ್ತೇಜಿಸಲಾಗುತ್ತದೆ. ಇದೇ ವೇಳೆ ಡೇಟಾ ಹಂಚಿಕೆಗೆ ಒಂದು ವ್ಯವಸ್ಥೆಯನ್ನು ರೂಪಿಸಿ ಅದಕ್ಕೆ ನಿರ್ಬಂಧವೂ ಇರಲಿದೆ. ವೈಯಕ್ತಿಕ ಮತ್ತು ವೈಯಕ್ತಿಕೇತರ ಡೇಟಾ, ನೀತಿ ಮುಂತಾದ ವಿಚಾರಗಳ ಕುರಿತು ಚರ್ಚೆ ಚಾಲ್ತಿಯಲ್ಲಿದ್ದು, ನಿಯಮ, ನಿರ್ಬಂಧ ರೂಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಯಾವುದೇ ಕೈಗಾರಿಕೆ, ಇ-ಕಾಮರ್ಸ್, ಗ್ರಾಹಕ ರಕ್ಷಣೆ, ರಾಷ್ಟ್ರೀಯ ಭದ್ರತೆ, ಆರ್ಥಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ವಿಚಾರ ಬಂದಾಗ ಅವುಗಳ ರಕ್ಷಣೆಗೆ ಬೇಕಾದ ಮತ್ತು ಅನಧಿಕೃತ ವ್ಯಕ್ತಿಗಳಿಂದ ಆಗುವ ಡೇಟಾ ದುರ್ಬಳಕೆ ತಡೆಗೆ ಬೇಕಾದ ನಿಯಮಗಳಿಲ್ಲ. ಹೀಗಾಗಿ ಅಂತಹ ಮೂಲತತ್ತ್ವ ಮತ್ತು ನಿಯಮಗಳನ್ನು ಸರ್ಕಾರ ರೂಪಿಸಲಿದೆ.

    ಗ್ರಾಹಕ ಸ್ವಾತಂತ್ರ್ಯ

    ಸರಕು ಮತ್ತು ಸೇವೆಗಳನ್ನು ಪಡೆಯುವಾಗ ಗ್ರಾಹಕರಿಗೆ ಅದರ ಮೂಲ ರಾಷ್ಟ್ರ, ಭಾರತದಲ್ಲಿ ಆಗಿರುವ ಮೌಲ್ಯ ವರ್ಧನೆ ಮತ್ತು ಇಂತಹ ಇತರೆ ಮಾಹಿತಿಯನ್ನು ಒದಗಿಸಬೇಕು. ಇಂತಹ ಮಾಹಿತಿ ಒದಗಿಸುವುದರಿಂದ ಗ್ರಾಹಕರು ತಾವು ಬಳಸುವ ಉತ್ಪನ್ನ ಅಥವಾ ಸೇವೆಯ ಬಗ್ಗೆ ಪೂರ್ಣಮಾಹಿತಿ ಹೊಂದಿದವರಾಗುತ್ತಾರೆ. ಇದು ಖರೀದಿಗೆ ನಿರ್ಣಾಯಕ ಅಂಶ ಕೂಡ ಆಗಲಿದೆ ಎಂದು ಕರಡು ನಿಯಮದಲ್ಲಿ ಇದೆ.

    ಸಮಾನ ಅವಕಾಶ

    ಇ-ಕಾಮರ್ಸ್ ವೇದಿಕೆಗಳಲ್ಲಿ ಇರುವ ಎಲ್ಲ ಮಾರಾಟಗಾರರು/ವೆಂಡರ್​ಗಳು ಸಮಾನ ಅವಕಾಶ ಪಡೆಯಬೇಕು. ಇ-ಕಾಮರ್ಸ್ ವೇದಿಕೆಗಳೂ ಎಲ್ಲರನ್ನೂ ಸಮಾನರೆಂದು ಪರಿಗಣಿಸಬೇಕು. ವಿನಾಯಿತಿಯಲ್ಲಿ ಮತ್ತು ವ್ಯವಹಾರದಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಭಾರತದ ಗ್ರಾಹಕರು ಮತ್ತು ಸ್ಥಳೀಯ ನವೋದ್ಯಮ ವ್ಯವಸ್ಥೆಯ ಹಿತದೃಷ್ಟಿಯಿಂದ ಸಾಕಷ್ಟು ಸೇವಾ ಪೂರೈಕೆದಾರರು ಇರುವಂತೆ ನೋಡಿಕೊಳ್ಳಬೇಕು. ಡಿಜಿಟಲ್ ವೇದಿಕೆಯಲ್ಲಿ ಏಕಸ್ವಾಮ್ಯ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು ಎಂಬ ಅಂಶವನ್ನೂ ಕರಡು ನೀತಿ ಉಲ್ಲೇಖಿಸಿದೆ.

    ಜಾರಕಿಹೊಳಿಯಿಂದ ಮೋಸವಾಗಿದೆ, ನನಗೆ ರಕ್ಷಣೆ ಕೊಡಿ: ಹೊಸ ವಿಡಿಯೋದಲ್ಲಿ ‘ಸಂತ್ರಸ್ತ’ ಯುವತಿ ಮೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts