ನ್ಯೂಸ್

ಯೋಗಿ ಆದಿತ್ಯನಾಥ್​ ಪ್ರಮಾಣವಚನ: ದೇಶದಲ್ಲೀಗ ಐವರು 'ಅಂಡರ್​ 50 ಸಿಎಂ'!

ನವದೆಹಲಿ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಮೂಲಕ ದೇಶದಲ್ಲಿ 'ಅಂಡರ್​ 50 ಸಿಎಂ' ಅಂದರೆ 50 ವರ್ಷದೊಳಗಿನ ಮುಖ್ಯಮಂತ್ರಿಗಳ ಪ್ರಮಾಣ ಐದಕ್ಕೆ ತಲುಪಿದೆ.

ಈ ತಿಂಗಳಲ್ಲಿ ಪಂಜಾಬ್​ ಮುಖ್ಯಮಂತ್ರಿಯಾಗಿ 48ರ ವಯಸ್ಸಿನ ಭಗವಂತ್ ಮಾನ್​ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ 49ರ ವಯಸ್ಸಿನ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒಟ್ಟು ಐವರು 'ಅಂಡರ್ 50' ಸಿಎಂ ಎನಿಸಿಕೊಂಡಿದ್ದಾರೆ.

ಸದ್ಯ ಇರುವ ಅಂಡರ್ 50 ಮುಖ್ಯಮಂತ್ರಿಗಳ ಪೈಕಿ ಬಿಜೆಪಿಯವರೇ ಅಧಿಕ. ಬಿಜೆಪಿಯ ನಾಲ್ವರು ಹಾಗೂ ವೈಎಸ್​ಆರ್​​ನ ಒಬ್ಬರು ಅಂಡರ್​ 50 ಸಿಎಂ ವರ್ಗಕ್ಕೆ ಸೇರುತ್ತಾರೆ. 2019ರಲ್ಲಿ ಜಗನ್​ಮೋಹನ್ ರೆಡ್ಡಿ ತಮ್ಮ 46ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದರು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ ಖಂಡು (42), ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (48) ಮತ್ತು ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ (46) ಕೂಡ ಅಂಡರ್ 50 ಅಡಿ ಬರುತ್ತಾರೆ.